ನವದೆಹಲಿ :ಕಾಂಗ್ರೆಸ್ ಅಧ್ಯಕ್ಷೆ ಮತ್ತು ಸಿಪಿಪಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ವಿವಿಧ ಕ್ರಮಗಳನ್ನು ಸೂಚಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸೋನಿಯಾ ಗಾಂಧಿ 5 ಮುಖ್ಯ ಅಂಶಗಳನ್ನು ನಮೂದಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
- ಕೇಂದ್ರ ಸರ್ಕಾರವು ಪ್ರಸ್ತುತ ಮಾಧ್ಯಮ ಜಾಹೀರಾತುಗಳಿಗಾಗಿ ವರ್ಷಕ್ಕೆ ಸರಾಸರಿ 1,250 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಜಾಹೀರಾತುಗಳನ್ನು ಎರಡು ವರ್ಷಗಳವರೆಗೆ ನಿಷೇಧಿಸಿ. ಕೊರೊನಾ ವೈರಸ್ನ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿವಾರಿಸಲು ಈ ಮೊತ್ತ ನೆರವಾಗುತ್ತದೆ.
- 20,000 ಕೋಟಿ ರೂ.ಗಳ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಮುಂದಕ್ಕೆ ಹಾಕಿ. ಈ ಹಣವನ್ನು ಆರೋಗ್ಯ ಸೌಕರ್ಯಗಳಿಗಾಗಿ ಬಳಸಿ.
- ಸರ್ಕಾರದ ಖರ್ಚನ್ನು ಶೇ. 30ರಷ್ಟು ಇಳಿಸಿ. ಈ 30 ಪ್ರತಿಶತ (ಅಂದರೆ ವರ್ಷಕ್ಕೆ ಅಂದಾಜು ₹ 2.5 ಲಕ್ಷ ಕೋಟಿ) ಮೊತ್ತವನ್ನು ವಲಸೆ ಕಾರ್ಮಿಕರು, ಕಾರ್ಮಿಕರು, ರೈತರು ಮತ್ತು ಅಸಂಘಟಿತ ವಲಯದಲ್ಲಿರುವವರಿಗೆ ಆರ್ಥಿಕ ಸುರಕ್ಷತೆಯನ್ನು ಸ್ಥಾಪಿಸಲು ಹಂಚಿಕೆ ಮಾಡಬಹುದು.
- ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲರ ವಿದೇಶ ಪ್ರವಾಸಗಳನ್ನು ತಡೆ ಹಿಡಿಯಬೇಕು. ವಿಶೇಷ ತುರ್ತುಸ್ಥಿತಿ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ಅಗತ್ಯತೆಗಳ ಸಂದರ್ಭದಲ್ಲಿ ವಿನಾಯಿತಿಗಳನ್ನು ನೀಡಬಹುದು.
- ಪಿಎಂ ಕೇರ್ಸ್ ಫಂಡ್ನಿಂದ ಎಲ್ಲಾ ಮೊತ್ತವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಿ. ಈವರೆಗೆ ಬಳಕೆಯಾಗದ 3,800 ಕೋಟಿ ರೂ.ಗಳನ್ನು ಸದ್ಬಳಕೆ ಮಾಡಿ.