ಮುಂಬೈ:288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ 160 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದು, ಮುಖ್ಯಮಂತ್ರಿ ಗಾದಿಗೇರಲು ಇದೀಗ ಫೈಟ್ ನಡೆಸುತ್ತಿವೆ.
ಶಿವಸೇನೆ ಈಗಾಗಲೇ ಹೇಳಿರುವ ಪ್ರಕಾರ 50: 50 ಸೂತ್ರಕ್ಕೆ ಪಟ್ಟು ಹಿಡಿದಿದ್ದು, ತನ್ನ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವುದಿಲ್ಲ ಎಂದಿದೆ. ಇದರ ಜತೆಗೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಶಿವಸೇನೆ ಸೂತ್ರದ ಪ್ರಕಾರ ಈಗಾಗಲೇ ಎರಡು ಪಕ್ಷಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ ಬಿಜೆಪಿ ನಮಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಿಕೊಂಡು ಅದನ್ನ ಲಿಖಿತವಾಗಿ ಬರೆದುಕೊಟ್ಟರೆ ಮಾತ್ರ ಅವರೊಂದಿಗೆ ಕೈಜೋಡಿಸುವುದಾಗಿ ಹೇಳಿದೆ.
ಈಗಾಗಲೇ ಶಿವಸೇನೆ ಶಾಸಕರು ಸಹ ತಮ್ಮ ಪಕ್ಷದಿಂದ ಗೆಲುವು ದಾಖಲು ಮಾಡಿರುವ ಆದಿತ್ಯ ಠಾಕ್ರೆ ಮುಂದಿನ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇದೇ ವಿಷಯಯಕ್ಕೆ ಶಿವಸೇನೆ-ಬಿಜೆಪಿ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.