ಕರ್ನಾಟಕ

karnataka

ETV Bharat / bharat

'ಮಹಾ' ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೈ ಶಾಸಕರು - Maharashtra cabinet expansion

ಸಿಎಂ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕರಿಸಿದ 32 ದಿನಗಳ ನಂತರ ಸಂಪುಟ ವಿಸ್ತರಿಸಲು ಮುಂದಾಗಿದ್ದಾರೆ. ಕಾಂಗ್ರೆಸ್​ನಿಂದ 10 ಶಾಸಕರು ಇಂದು ಮಹಾರಾಷ್ಟ್ರ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Maharashtra Government
'ಮಹಾ' ಸರ್ಕಾರ

By

Published : Dec 30, 2019, 10:44 AM IST

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇಂದು ಸಚಿವ ಸಂಪುಟ ವಿಸ್ತರಿಸಲಿದ್ದು, ಕಾಂಗ್ರೆಸ್​ನಿಂದ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಿಎಂ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕರಿಸಿದ 32 ದಿನಗಳ ನಂತರ ಸಂಪುಟ ವಿಸ್ತರಿಸಲು ಮುಂದಾಗಿದ್ದು, ಕಾಂಗ್ರೆಸ್ ಶಾಸಕರಾದ ಅಶೋಕ್ ಚವಾಣ್, ಕೆ.ಸಿ.ಪಡ್ವಿ, ವಿಜಯ್ ವಾಡೆಟ್ಟಿವಾರ್, ಅಮಿತ್ ದೇಶ್​ಮುಖ್, ಸುನಿಲ್ ಕೇದಾರ್, ಯಶೋಮತಿ ಠಾಕೂರ್, ವರ್ಷಾ ಗಾಯಕ್​ವಾಡ್​, ಅಸ್ಲಂ ಶೇಖ್, ಸತೇಜ್ ಪಾಟೀಲ್ ಮತ್ತು ವಿಶ್ವಜೀತ್ ಕದಮ್ ಇಂದು ಮಹಾರಾಷ್ಟ್ರ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ABOUT THE AUTHOR

...view details