ಕರ್ನಾಟಕ

karnataka

ETV Bharat / bharat

10 ರೂ. ಹಂಚಲು ಹೋಗಿ ಸುದ್ದಿಯಾದರೇ ಕೈ ಶಾಸಕ? - ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ

ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಮಹಿಳೆಯರನ್ನೆಲ್ಲ ಒಟ್ಟುಗೂಡಿಸಿ ಅಂತರ ಕಾಯ್ದುಕೊಳ್ಳದೇ ಪ್ರತಿಯೊಬ್ಬರಿಗೂ 10 ರೂ. ಹಂಚಿದ್ದಾರೆ. ಹಣ ವಿತರಿಸುತ್ತಿರುವ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಪ್ರತುಲ್ ಶಹದೇವ್ ಆರೋಪಿಸಿದ್ದಾರೆ.

By

Published : Apr 11, 2020, 8:39 PM IST

Updated : Apr 11, 2020, 10:04 PM IST

ರಾಂಚಿ: ತಮ್ಮ ಹೇಳಿಕೆಗಳು ಮತ್ತು ಚಟುವಟಿಕೆಗಳ ಬಗ್ಗೆ ಸದಾ ಚರ್ಚೆಯಲ್ಲಿರುವ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೊರೊನಾ ಹರಡುತ್ತಿರುವ ಭೀತಿ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಕೇವಲ 10 ರೂಪಾಯಿ ವಿತರಿಸಲು ಹೋಗಿ ಸಾಮಾಜಿಕ ಅಂತರ ಸಹ ಕಾಯ್ದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರತುಲ್ ಶಹದೇವ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಮಹಿಳೆಯರನ್ನೆಲ್ಲ ಒಟ್ಟುಗೂಡಿಸಿ ಅಂತರ ಕಾಯ್ದುಕೊಳ್ಳದೇ ಪ್ರತಿಯೊಬ್ಬರಿಗೂ 10 ರೂ. ಹಂಚಿದ್ದಾರೆ. ಹಣ ವಿತರಿಸುತ್ತಿರುವ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಪ್ರತುಲ್ ಶಹದೇವ್ ಆರೋಪಿಸಿದ್ದಾರೆ.

ಕೊರೊನಾ ಹರಡುವ ಭೀತಿ ಹೆಚ್ಚುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಶಾಸಕರು ಬಡವರೊಂದಿಗೆ ತಮಾಷೆ ಮಾಡುತ್ತಿದ್ದಾರೆ. ಕೇವಲ 10 ರೂ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಖಂಡನೀಯ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತುಲ್ ಶಹದೇವ್ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬನ್ನಾ ಗುಪ್ತಾ, ಅಂತಹ ಯಾವುದೇ ಪ್ರಕರಣವು ಗಮನಕ್ಕೆ ಬಂದರೆ ಆ ಬಗ್ಗೆ ಪಕ್ಷದ ಅಧ್ಯಕ್ಷರು ನಿರ್ಧರಿಸುತ್ತಾರೆ. ನಾನು ಈ ವಿಚಾರವಾಗಿ ಏನನ್ನೂ ಮಾತನಾಡಲ್ಲ. ಈ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಪಕ್ಷದ ವೇದಿಕೆಯಲ್ಲಿ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

Last Updated : Apr 11, 2020, 10:04 PM IST

ABOUT THE AUTHOR

...view details