ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಶಾಸಕಿಗೆ COVID-19 ದೃಢ: ವೈದ್ಯರ ಸಲಹೆಯಂತೆ ಹೋಂ ಕ್ವಾರಂಟೈನ್​ - COVID-19 ವರದಿ

ಕಾಂಗ್ರೆಸ್​ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಹಾಗೂ ಅವರ ಕುಟುಂಬದ ಸದಸ್ಯರಲ್ಲಿ COVID-19 ಕಾಣಿಸಿಕೊಂಡಿದ್ದು, ಎಲ್ಲರೂ ಹೋಂ ಕ್ವಾರಂಟೈನ್​ ಆಗಿದ್ದಾರೆ.

congress-mla-deepika-pandey-singh-tests-positive-for-covid-19
ಕಾಂಗ್ರೆಸ್​ ಶಾಸಕಿಗೆ COVID-19

By

Published : Aug 12, 2020, 6:58 PM IST

ರಾಂಚಿ (ಜಾರ್ಖಂಡ್):ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಬುಧವಾರ ಕೋವಿಡ್ -19 ಟೆಸ್ಟ್ ಮಾಡಿಸಿದ್ದು, ಅವರ ವರದಿ ಪಾಸಿಟಿವ್ ಬಂದಿದೆ.

ಅವರ ಕುಟುಂಬ ಸದಸ್ಯರಿಗೂ ಕೊರೊನಾ ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ಶಾಸಕಿ ದೀಪಿಕಾ ಪಾಂಡೆ ಸಿಂಗ್​ ಹಾಗೂ ಮನೆ ಸದಸ್ಯರು ಹೋಂ ಕ್ವಾರಂಟೈನ್​ ಆಗಿದ್ದಾರೆ. ಈ ಬಗ್ಗೆ ದೀಪಿಕಾ ಪಾಂಡೆ ಟ್ವೀಟ್​ ಸಹ ಮಾಡಿದ್ದಾರೆ.

ಕಾಂಗ್ರೆಸ್​ ಶಾಸಕಿಗೆ COVID-19

ನನ್ನ ಮತ್ತು ನನ್ನ ಕುಟುಂಬದವರಿಗೆ ನಡೆಸಿದ COVID-19 ಟೆಸ್ಟ್​ ವರದಿ ಪಾಸಿಟಿವ್ ಬಂದಿದೆ. ನಾನು ಈಗಾಗಲೇ ಹಲವರನ್ನು ಭೇಟಿ ಮಾಡಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಸೋಂಕಿನ ಅಪಾಯ ತಪ್ಪಿಸುವ ಸಲುವಾಗಿ ತಮ್ಮನ್ನು ಸಂಪರ್ಕಿಸಲು ಬರುವ ಎಲ್ಲರಿಗೂ ಶಾಸಕಿ ಮನವಿ ಮಾಡಿದ್ದಾರೆ.

ABOUT THE AUTHOR

...view details