ಮುಂಬೈ: ಮುಂಬೈ-ಗೋವಾ ಹೆದ್ದಾರಿ ಬಳಿ ರಸ್ತೆ ಪರಿಶೀಲಿಸುತ್ತಿದ್ದ ಇಂಜಿನಿಯರ್ ಮೇಲೆ ಕಾಂಗ್ರೆಸ್ ಶಾಸಕ ಹಾಗೂ ಆತನ ಸಹಚರರು ಕೆಸರು ಸುರಿದು, ಸೇತುವೆಗೆ ಕಟ್ಟಿಹಾಕಿದ ಘಟನೆ ನಡೆದಿದೆ.
ಕಾಂಗ್ರೆಸ್ ಶಾಸಕ ನಿತೇಶ್ ನಾರಾಯಣ್ ರಾಣೆ ಹಾಗೂ ಆತನ ಸಹಚರರು, ಇಂಜಿನಿಯರ್ ಪ್ರಕಾಶ್ ಶೆಡೇಕರ್ ಮೇಲೆ ಕೆಸರು ಸುರಿದಿದ್ದಾರೆ. ಕಂಕಾವಲಿಯಲ್ಲಿನ ಮುಂಬೈ-ಗೋವಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ಪರಿಶೀಲಿಸಲು ಇಂಜಿನಿಯರ್ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.