ನವದೆಹಲಿ:ಎಐಸಿಸಿ ನಿನ್ನೆಯಷ್ಟೆ ಬಿಡುಗಡೆ ಮಾಡಿದ ಲೋಕಸಭಾ ಚುನಾವಣೆ ಪ್ರಣಾಳಿಕೆ ಸುಳ್ಳಿನ ಕಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಟುಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈ ಪಾಳಯವು ದೇಶ ಸೈನಿಕರು ಹಾಗೂ ಜನರನ್ನು ಅಪಮಾನಿಸಿದೆ.

ದೇಶದ್ರೋಹ ಕಾನೂನು ಪರಿಶೀಲನೆ, ಸೇನೆಗೆ ನೀಡಿರುವ ವಿಶೇಷ ಅಧಿಕಾರ ಹಿಂಪಡೆತ ಇವನ್ನೆಲ್ಲ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದು ದೇಶ ಒಡೆಯುವವರಿಗೆ ಕೆಲಸ ಸಲೀಸು ಮಾಡಿಕೊಡಲಿದೆ.
ಭಾರತ್ ಮಾತಾಕಿ ಜೈ ಎನ್ನುವ ಘೋಷಣೆ ಬದಲು ಭಾರತವನ್ನು ತುಂಡು ಮಾಡೋಣ ಎನ್ನು ಘೊಷಣೆಗಳು ಮೊಳಗಲಿವೆ ಎಂದು ಶಾ ಟೀಕಿಸಿದರು.