ನವದೆಹಲಿ:ಕಾಂಗ್ರೆಸ್ ಮುಖಂಡ ಶಶಿ ತರೂರ್ ಮತ್ತು ಪಾಕಿಸ್ತಾನದ ಪತ್ರಕರ್ತೆ ಮೆಹರ್ ತಾರಾರ್ ಅವರು ದುಬೈನಲ್ಲಿ ಮೂರು ರಾತ್ರಿಗಳು ಕಳೆದಿದ್ದರು ಎಂದು ಸುನಂದಾ ಪುಷ್ಕರ್ ಅವರ ಪತ್ರಕರ್ತ ಸ್ನೇಹಿತರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್, ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ದುಬೈನಲ್ಲಿ ಹೋಟೆಲ್ನಲ್ಲಿ ಪಾಕ್ ಪತ್ರಕರ್ತೆ ಜೊತೆ 3 ರಾತ್ರಿ ಕಳೆದಿದ್ದ ತರೂರ್ - ಪಾಕ್ ಪತ್ರಕರ್ತೆ
ಸಾರ್ವಜನಿಕ ಅಭಿಯೋಜಕ ಅತುಲ್ ಶ್ರೀವಾಸ್ತವ ಅವರು ಮೃತ ಸ್ನೇಹಿತರಾಗಿದ್ದ ಪತ್ರಕರ್ತೆ ನಳಿನಿ ಸಿಂಗ್ ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಓದಿದರು. ನಳಿನಿ ಸಿಂಗ್ ಹೇಳಿಕೆ ಹೀಗಿತ್ತು; "ನಾನು ಸುನಂದನನ್ನು 3-4 ವರ್ಷಗಳಿಂದ ತಿಳಿದಿದ್ದೆ. ಕಳೆದ ಒಂದು ವರ್ಷದಿಂದ ಅವಳು ತನ್ನ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಳ್ಳಲು ಪ್ರಾರಂಭಿಸಿದಳು. ಅವಳು ತರೂರ್ ಜೊತೆಗಿನ ಸಂಬಂಧವನ್ನು ಹಂಚಿಕೊಂಳುತ್ತಿದ್ದಳು. ತರೂರ್ ಮತ್ತು ತಾರಾರ್ ಅವರು ಮೂರು ರಾತ್ರಿ ಜೊತೆಯಾಗಿ ಕಳೆದಿದ್ದರ ಕುರಿತು ಹಂಚಿಕೊಂಡಿದ್ದರು' ಎಂಬುದು ಹೇಳಿಕೆಯಲ್ಲಿದೆ.
ಸಾರ್ವಜನಿಕ ಅಭಿಯೋಜಕ ಅತುಲ್ ಶ್ರೀವಾಸ್ತವ ಅವರು ಮೃತ ಸ್ನೇಹಿತರಾಗಿದ್ದ ಪತ್ರಕರ್ತೆ ನಳಿನಿ ಸಿಂಗ್ ಅವರ ಹೇಳಿಕೆಯನ್ನು ಓದಿದರು. ಹೇಳಿಕೆ ಹೀಗಿದೆ: "ನಾನು ಸುನಂದನನ್ನು 3-4 ವರ್ಷಗಳಿಂದ ತಿಳಿದಿದ್ದೆ. ಕಳೆದ ಒಂದು ವರ್ಷದಿಂದ ಅವಳು ತನ್ನ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಳ್ಳಲು ಪ್ರಾರಂಭಿಸಿದಳು. ಅವಳು ತರೂರ್ ಜೊತೆಗಿನ ಸಂಬಂಧವನ್ನು ಹಂಚಿಕೊಂಳುತ್ತಿದ್ದಳು. ತರೂರ್ ಮತ್ತು ತಾರಾರ್ ಅವರು ಮೂರು ರಾತ್ರಿ ಜೊತೆಯಾಗಿ ಕಳೆದಿದ್ದರ ಕುರಿತು ಹಂಚಿಕೊಂಡಿದ್ದರು' ಎಂಬುದು ಹೇಳಿಕೆಯಲ್ಲಿದೆ.
ಸಾಯುವ ಒಂದು ದಿನ ಮೊದಲು ಅವಳ (ಸುನಂದ ಪುಷ್ಕರ್) ಫೋನ್‌ನಿಂದ ನನಗೆ ಕರೆ ಬಂದಿತ್ತು. ತರೂರ್ ಮತ್ತು ತಾರಾರ್ ರೊಮ್ಯಾಂಟಿಕ್ ಸಂದೇಶಗಳನ್ನು ಹಂಚಿಕೊಂಡಿದ್ದಾರೆ ಎನ್ನುತ್ತಾ ಅಳುತ್ತಿದ್ದರು. ಆಗಿನ ಸಾರ್ವತ್ರಿಕ ಚುನಾವಣೆಯ ಬಳಿಕ ತರೂರ್ ಸುನಂದಾ ಅವರನ್ನು ವಿಚ್ಛೇದನ ನೀಡಲಿದ್ದಾರೆ ಎಂಬುದು ಸಂದೇಶದಲ್ಲಿ ಹೇಳಲಾಗಿತ್ತು. ಅವರ ಕುಟುಂಬವೂ ಈ ನಿರ್ಧಾರಕ್ಕೆ ಬೆಂಬಲಿಸಿತ್ತು ಎಂದು ಹೇಳಿಕೆ ನೀಡಿದ್ದಾರೆ.