ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ತುದಿಗಾಲಲ್ಲಿ ನಿಂತಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯು ಪ್ರತ್ಯೇಕ ರಾಷ್ಟ್ರದ ಸಿದ್ಧಾಂತ ಹೊಂದಿದ್ದ ಅಖಿಲ ಭಾರತ ಮುಸ್ಲೀಂ ಲೀಗ್‌ನ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾರ ಉದ್ದೇಶವನ್ನು ಪೂರ್ಣಗೊಳಿಸುತ್ತದೆ ಎಂದು ಕೇರಳ ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ಜಿನ್ನಾರ ದ್ವಿರಾಷ್ಟ್ರ ಉದ್ದೇಶ ಈಡೇರಿಸುತ್ತದೆ: ಶಶಿ ತರೂರ್ - Congress leader Shashi Tharoor reaction about CAA
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಮಹಮ್ಮದ್ ಅಲಿ ಜಿನ್ನಾರ ಪ್ರತ್ಯೇಕ ರಾಷ್ಟ್ರ ಸಿದ್ಧಾಂತದ ಉದ್ದೇಶವನ್ನು ಪೂರೈಸುತ್ತದೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ಶಶಿ ತರೂರು ವಿವಾದ ಸೃಷ್ಟಿಸಿದ್ದರು.
ಕಾಂಗ್ರೆಸ್ ಮುಖಂಡ ಶಶಿ ತರೂರ್
ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕೆ ಅರ್ಹರು ಎಂದು ಜಿನ್ನಾ ಹೇಳಿದ್ದು ಸರಿ. ಏಕೆಂದರೆ ಹಿಂದೂಗಳು ಕೇವಲ ಮುಸ್ಲಿಮರ ಕಡೆಗೆ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated : Jan 26, 2020, 6:08 PM IST
TAGGED:
ಕಾಂಗ್ರೆಸ್ ಮುಖಂಡ ಶಶಿ ತರೂರ್