ಕರ್ನಾಟಕ

karnataka

ETV Bharat / bharat

ಹೈದರಾಬಾದ್, ಉನ್ನಾವೋ ಪ್ರಕರಣದ ಬಗ್ಗೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ - ಉನ್ನಾವೋ ಪ್ರಕರಣ

ಹೈದರಾಬಾದ್ ​ಎನ್​ಕೌಂಟರ್​​ ಹಾಗೂ ಉನ್ನಾವೋ ಪ್ರಕರಣದ ಬಗ್ಗೆ ಕಾಂಗ್ರೆಸ್​​​ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ.

Congress leader Priyanka Gandhi
ಪ್ರಿಯಾಂಕಾ ಗಾಂಧಿ ಮಾತು

By

Published : Dec 6, 2019, 8:48 PM IST

ಲಕ್ನೋ(ಉತ್ತರ ಪ್ರದೇಶ): ಹೈದರಾಬಾದ್​​ನಲ್ಲಿ ನಡೆದಿರುವ ರೇಪ್ ಆ್ಯಂಡ್ ಮರ್ಡರ್​​ ಆರೋಪಿಗಳ ಎನ್​ಕೌಂಟರ್​ ಹಾಗೂ ಉನ್ನಾವೋ ಸಂತ್ರಸ್ತೆಯ ಹತ್ಯೆ ಪ್ರಕರಣದ ಬಗ್ಗೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಮಾತು

ಕಾನೂನು ವ್ಯವಸ್ಥೆ ಸರಿಯಾದ ರೀತಿಯಲ್ಲಿಡುವುದು ಸರ್ಕಾರದ ಕರ್ತವ್ಯ. ಕಳೆದ 11 ತಿಂಗಳಲ್ಲಿ ಉನ್ನಾವೋದಲ್ಲಿ ಬರೋಬ್ಬರಿ 90 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ. ಅವರು ಅಪರಾಧಿಗಳ ಪರ ಕೆಲಸ ಮಾಡ್ತಾರಾ ಅಥವಾ ಸಂತ್ರಸ್ತರ ಪರ ತಮ್ಮ ನಿರ್ಧಾರ ಕೈಗೊಳ್ಳುತ್ತಾರಾ? ಸದ್ಯ ದೇಶದಲ್ಲಿ ಮಹಿಳೆಯ ಮೇಲಿನ ಬಲಾತ್ಕಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ರು.

ಇದೇ ವೇಳೆ ಮಹಿಳೆಯರು ತಮ್ಮ ಹಕ್ಕು ಪಡೆದುಕೊಳ್ಳುವ ಸಮಯ ಇದೀಗ ಬಂದಿದ್ದು ಪಂಚಾಯ್ತಿ ಚುನಾವಣೆ, ವಿಧಾನಸಭಾ ಎಲೆಕ್ಷನ್​ಗಳಲ್ಲಿ ಸ್ಪರ್ಧೆ ಮಾಡಬೇಕು ಎಂದರು.

ABOUT THE AUTHOR

...view details