ಕರ್ನಾಟಕ

karnataka

ETV Bharat / bharat

EXCLUSIVE : ಕಾಂಗ್ರೆಸ್ ಅನ್ನು ಒಬ್ಬ "ಗಾಂಧಿಯೇ" ಮುನ್ನಡೆಸಬೇಕು-ಬಿಜೆಪಿ ಸೋಲಿಸಲು ಗೆಳೆಯರನ್ನು ಹುಡುಕಬೇಕು: ಮಣಿಶಂಕರ್ ಅಯ್ಯರ್ - ಮಣಿಶಂಕರ್ ಅಯ್ಯರ್

ಕಾಂಗ್ರೆಸ್​ ನಡೆದು ಬಂದ ರೀತಿ, ಪ್ರಸ್ತುತ ಸನ್ನಿವೇಶ, ಮುಂಬರುವ ದಿನಗಳಿಗಾಗಿ ಪಡಬೇಕಾದ ಶ್ರಮಗಳ ಕುರಿತು ಹಿರಿಯ ಕಾಂಗ್ರೆಸ್​ ನಾಯಕ ಮಣಿಶಂಕರ್ ಅಯ್ಯರ್​ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

congress leader manishankar ayyar interview
ವಿಶೇಷ ಸಂದರ್ಶನ: ಕಾಂಗ್ರೆಸ್ ಅನ್ನು ಒಬ್ಬ "ಗಾಂಧಿಯೇ" ಮುನ್ನಡೆಸಬೇಕ-ಬಿಜೆಪಿ ಸೋಲಿಸಲು ಗೆಳೆಯರನ್ನು ಹುಡುಕಬೇಕು: ಮಣಿಶಂಕರ್ ಅಯ್ಯರ್

By

Published : Sep 4, 2020, 10:05 AM IST

Updated : Sep 4, 2020, 10:36 AM IST

1)ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ Vs ಕಿರಿಯ, ಹಾಗು ನಾಯಕತ್ವದ ಬಿಕ್ಕಟ್ಟು ಭುಗಿಲೆದ್ದಿದೆ. ಆದರೆ ಪಕ್ಷದೊಳಗಿನ ನಿಜವಾದ ಸಮಸ್ಯೆ ಏನು?

ಉತ್ತರ: ಸರಿ; ಆದರೆ, ಅದು ನಾಯಕತ್ವ ಕುರಿತ ಸಮಸ್ಯೆಯಲ್ಲ. ಅದು ಪ್ರಾಸಂಗಿಕವಾಗಿ ಉದ್ಭವಿಸಿದ ವಿಷಯವಷ್ಟೇ. ಇತ್ತೀಚಿಗೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದ 23 ಹಿರಿಯ ನಾಯಕರು ಪಕ್ಷ ಎದುರಿಸುತ್ತಿರುವ ಸಮಸ್ಯೆಗಳಿಗೆ ಮೂಲ ಪರಿಹಾರವು ಪಕ್ಷದ ನಾಯಕತ್ವದ ಬದಲಾವಣೆಯಲ್ಲಿದೆ ಎಂದು ಸಲಹೆ ನೀಡಿಲ್ಲ. ಒಂದೊಮ್ಮೆ, ಅವರು ಪಕ್ಷದ ನಾಯಕತ್ವವೇ ಸಮಸ್ಯೆಯ ಮೂಲ ಎಂದು ಭಾವಿಸಿದ್ದರೆ, ಎಐಸಿಸಿ ಅಧಿವೇಶನ ನಡೆದಾಗ ಅದರಲ್ಲಿ ಚುನಾವಣೆಗೆ ನಿಲ್ಲಬಹುದು. ಆದರೆ ಅಂತವರಾರೂ ಈ ಹಿಂದೆ ನಡೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿಯವರು ಗಳಿಸಿದ 9,400 ಮತಗಳಿಗೆ ಪ್ರತಿಯಾಗಿ, 94 ಮತಗಳನ್ನು ಪಡೆದಿದ್ದ ಜಿತೇಂದ್ರ ಪ್ರಸಾದ ಅವರಂತೆ ಮುಖಭಂಗ ಅನುಭವಿಸುವುದಿಲ್ಲ ಎಂದು ನಾನು ನಂಬಿರುತ್ತೇನೆ. ಈ ಸಮಸ್ಯೆಯ ಮೂಲ ಬೇರೆಡೆಯೇ ಇದೆ. ದೇಶದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಆ ಬಳಿಕ, ಮೊದಲ 20 ವರ್ಷಗಳವರೆಗೆ ಕಾಂಗ್ರೆಸ್ ಜೊತೆಗಿದ್ದ ನಾನಾ ಸಾಮಾಜಿಕ ಗುಂಪುಗಳು 1967 ರ ರಾಷ್ಟ್ರೀಯ ಚುನಾವಣೆಯ ಬಳಿಕ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಿಂದ ದೂರವಾಗಿ, ತಮ್ಮದೇ ಸ್ವಂತ ನೆಲೆಗಟ್ಟಿನಲ್ಲಿ ಭವಿಷ್ಯ ಕಂಡುಕೊಳ್ಳಲು ಯತ್ನಿಸುತ್ತಿವೆ. ಅದರಲ್ಲೂ ಮುಖ್ಯವಾಗಿ, 1990ರಲ್ಲಿ ಮಂಡಲ್ ಚಳುವಳಿ ಬಳಿಕ, ಹಲವಾರು ಹಿಂದುಳಿದ ವರ್ಗಗಳು ಕಾಂಗ್ರೆಸ್ ನಿಂದ ಪ್ರತ್ಯೇಕ ಗುಂಪುಗಳಾಗಿ ಚದುರಿವೆ. ಈ ಸಾಮಾಜಿಕ ಗುಂಪುಗಳಲ್ಲಿ ರೂಪುಗೊಂಡ ಈ ಬದಲಾವಣೆ ಇಂಥಹ ದೂರವಾಗುವಿಕೆಗೆ ಕಾರಣ. ಯಾದವರು ಹಿಂದುಳಿದ ವರ್ಗಗಳಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಮತ್ತು ಪರಿಶಿಷ್ಟ ಜಾತಿಗಳಲ್ಲಿ ಜಾತವ್ ಜಾತಿಯವರು ಎಲ್ಲರಿಗಿಂತ ಮುಂದಿದ್ದಾರೆ ಎಂಬ ಭಾವನೆ ದಟ್ಟವಾಗಿ ತಲೆದೋರಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ, ಒಂದು ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಈ ಘಟನೆ ಬಳಿಕ, ಸಾಮೂಹಿಕವಾಗಿ ಮುಸ್ಲಿಮರು ಕಾಂಗ್ರೆಸ್​​ನಿಂದ ದೂರವಾಗಿದ್ದಾರೆ. ನಾಯಕತ್ವವನ್ನು ಒಂದು ಸಮಸ್ಯೆ ಎಂಬ ದೃಷ್ಟಿಕೋನದಿಂದ ನೋಡಬೇಡಿ. ನನ್ನ ಪ್ರಕಾರ ಈ ಸಮಸ್ಯೆ ಮೇಲ್ನೋಟಕ್ಕೆ ಕಾಣಿಸುವುದಕ್ಕಿಂತಲೂ ಹೆಚ್ಚು ಆಳವಾಗಿದೆ. ಎಲ್ಲ ಸ್ತರದ ಸಾಮಾಜಿಕ ಗುಂಪುಗಳ ಬೆಂಬಲ ಮರು ಪಡೆಯುವುದರಿಂದ ಮಾತ್ರ ಇದನ್ನು ಪರಿಹರಿಸಲು ಸಾಧ್ಯವಿಲ್ಲ. ಬದಲಾಗಿ, ಈ ಗುಂಪುಗಳ ಬೆಂಬಲ ಪಡೆದ, ಪ್ರಾದೇಶಿಕ ಅಥವಾ ಜಾತಿ ಅಥವಾ ಸಮುದಾಯ ಆಧಾರದ ಮೇಲೆ ರೂಪುಗೊಂಡ ಪಕ್ಷಗಳನ್ನು ಮೈತ್ರಿಕೂಟದ ತೆಕ್ಕೆಗೆ ತಂದುಕೊಳ್ಳುವ ಮೂಲಕ ಇದನ್ನು ಸಾಧಿಸಬಹುದು. ಇದಕ್ಕೆ ಉತ್ತಮ ಉದಾಹರಣೆ ಕೇರಳದ ಮಾದರಿ. ಕೇರಳದಲ್ಲಿ ಹಿಂದಿನ ಚುನಾವಣೆ ಮುಗಿದ ಕೂಡಲೇ, ಹೊಸ ಮೈತ್ರಿಕೂಟದ ಸದಸ್ಯ ಪಕ್ಷಗಳ ನಿರ್ಧಾರವಾಗುತ್ತದೆ. ಈ ಪಕ್ಷಗಳು ತಮ್ಮದೇ ಗುರುತನ್ನು ಉಳಿಸಿಕೊಂಡಿರುತ್ತವೆ. ಚುನಾವಣೆಗೆ ಮುನ್ನವೇ, ಒಂದೊಮ್ಮೆ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಯಾವ ಖಾತೆ ಯಾವ ಪಕ್ಷಕ್ಕೆ ದೊರಕುತ್ತದೆ ಎಂಬುದು ನಿರ್ಧಾರವಾಗಿರುತ್ತದೆ.

ಮಣಿಶಂಕರ್ ಅಯ್ಯರ್ ಸಂದರ್ಶನ

2)ಆದರೆ ನಿಮಗೆ ಮೈತ್ರಿ ಕೂಟ ಏಕೆ ಬೇಕು? ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಬಾವುಟದ ಅಡಿ ಕೆಲಸ ಮಾಡಲು ಬಯಸುತ್ತವೆಯೇ?

ಉತ್ತರ: ಮೈತ್ರಿಕೂಟದ ಮೂಲಕ ಮಾತ್ರ, ಭಾರತೀಯ ಜನತಾ ಪಕ್ಷವನ್ನು ದೇಶದಲ್ಲಿ ಸೋಲಿಸಲು ಸಾಧ್ಯವಿದೆ. ಪ್ರಾದೇಶಿಕ ಪಕ್ಷಗಳು ಈ ನಿಟ್ಟಿನಲ್ಲಿ ಕಾಂಗ್ರೆಸ್ ಜೊತೆಗೆ ಕೆಲಸ ಮಾಡಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ. ನಾವು ಜೊತೆಯಾಗಿ ಬೆನ್ನು ಬಗ್ಗಿಸಿ ಕೆಲಸ ಮಾಡಿದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯ. ನಮ್ಮ ನಾಯಕತ್ವದಡಿ ಬನ್ನಿ ಎಂದು ಕರೆದರೆ, ಈ ಸಣ್ಣ ಪಕ್ಷಗಳು ನಮ್ಮ ಜೊತೆಗೆ ಕೈಜೋಡಿಸುವ ಸಾಧ್ಯತೆ ಇಲ್ಲ. ಅದರ ಬದಲಿಗೆ ಒಂದು ವಿಶಾಲ ತಳಹದಿ ಮೂಲಕ ಈ ಮೈತ್ರಿಕೂಟವನ್ನು ರಚಿಸಬೇಕಿದೆ. ಈ ಮೈತ್ರಿಕೂಟದ ಪಕ್ಷಗಳ ಪೈಕಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಪಕ್ಷ ಮೈತ್ರಿಕೂಟವನ್ನು ಮುನ್ನಡೆಸುತ್ತದೆ ಎಂಬ ಸೂತ್ರ ಸಿದ್ಧಪಡಿಸಬೇಕು. ಅಥವಾ, ಎಲ್ಲರಿಗೂ ಸ್ವೀಕಾರಾರ್ಹವಾಗುವ ಸೂತ್ರವನ್ನು ಹೊಂದಿರುವ ಸಾಮಾನ್ಯ ತಿಳುವಳಿಕೆಯ ಮೂಲಕ ಈ ಮೈತ್ರಿಕೂಟ ಮುನ್ನಡೆಸಬಹುದು. ಇದು ಸಾಧ್ಯವಾದರೆ, ನಾವು ಮೈತ್ರಿಕೂಟದ ನಾಯಕತ್ವ ವಿಷಯವನ್ನು ಬದಿಗಿಟ್ಟು ಮೈತ್ರಿ ಮುನ್ನಡೆಸುವುದನ್ನು ಖಚಿತಪಡಿಸಿಕೊಳ್ಳಬಹುದು. ಈಗ ಪ್ರಧಾನ ಮಂತ್ರಿ ಸ್ಥಾನವನ್ನು ಕೇಳಬೇಡಿ ಎಂದು ನಾನು ಹೇಳುತ್ತಿದ್ದೇನೆ. ಅದು ನಮಗೆ ನೈಸರ್ಗಿಕವಾಗಿ ಬಂದರೆ ಉತ್ತಮ. ಆದರೆ ಈ ಹಂತದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೋರಾಡುವುದು ಸೂಕ್ತವಲ್ಲ. 2024 ರ ಮಹಾ ಚುನಾವಣೆಯಲ್ಲಿ, ಬಿಜೆಪಿಯನ್ನು ಸೋಲಿಸಲು, ನಮಗೆ ಕೇರಳ ಮಾದರಿಯ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ.

3) ಕಳೆದ ಸತತ ಎರಡು ರಾಷ್ಟ್ರೀಯ ಚುನಾವಣೆಗಳಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲು ಅಗತ್ಯವಾದ ಕನಿಷ್ಠ 10 ಪ್ರತಿಶತ ಸ್ಥಾನಗಳನ್ನೂ (54) ಪಡೆಯಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ಖಂಡಿತ ಇದು ಪಕ್ಷದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಹಲವು ಸಂದರ್ಭಗಳಲ್ಲಿ ನಾವು ಹಿನ್ನಡೆ ಸಾಧಿಸಿದ್ದೇವೆ. ನಮಗೆ ನಾಯಕತ್ವ ಬರುವುದಾದರೆ ನಾವು ಚುನಾವಣೆ ಬಳಿಕ ಅದನ್ನು ತೆಗೆದುಕೊಳ್ಳಬೇಕು. ನನ್ನ ತವರು ರಾಜ್ಯ ತಮಿಳುನಾಡಿನಲ್ಲಿ 1967 ರಿಂದ ನಮ್ಮ ಪಕ್ಷ ಅಧಿಕಾರದಲ್ಲಿಲ್ಲ. ಜೊತೆಗೆ ಕನಿಷ್ಠ ಮುಂದಿನ 600 ವರ್ಷಗಳವರೆಗೆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಆದರೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿಸಲು ಸಿದ್ಧವಿಲ್ಲದ ಒಂದು ಹಳ್ಳಿಯೂ ಇಲ್ಲ. ಇದು ನಮಗೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸಮತೋಲನದ ಪಾತ್ರವನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗೂ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನೆರವು ನೀಡಿದೆ. ನಾನು 1991 ರಲ್ಲಿ ಸಂಸತ್ತಿಗೆ ಮೊದಲ ಬಾರಿಗೆ ಬಂದಾಗ, ಎಐಎಡಿಎಂಕೆ ಪಕ್ಷದ ಜೊತೆಗಿನ ಮೈತ್ರಿ ರಾಜ್ಯದಲ್ಲಿನ ಎಲ್ಲಾ 39 ಲೋಕಸಭಾ ಸ್ಥಾನಗಳನ್ನು ನಾವು ಹೆಳ್ಳುವಂತೆ ಮಾಡಿತ್ತು. ಈ ಲೋಕ ಸಭಾ ಚುನಾವಣೆಯಲ್ಲಿ ಒಂದು ಕುಶಲಯೇ ಸಾಧಿಸಲು ಸಾಧ್ಯವಿದ್ದರೆ ಮಾತ್ರ ನಾವು ಗೆಲ್ಲಲು ಸಾಧ್ಯ. ನಾವು ಎಲ್ಲಿ ಗೆಲ್ಲಬಹುದು ಎಂಬುದನ್ನು ಮೊದಲು ನಾವು ಗುರುತಿಸಬೇಕು ಮತ್ತು ಸಾಮಾಜಿಕ ಗುಂಪುಗಳನ್ನು ಮರಳಿ ಪಡೆಯಲು ನಾವು ಪ್ರಯತ್ನಿಸಬೇಕು.

4) ಇವೆಲ್ಲವೂ, ದೀರ್ಘಕಾಲೀನ ಪರಿಹಾರ. ಆದರೆ ಸದ್ಯಕ್ಕೆ ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರ ಅಗತ್ಯವಿದೆಯೇ?

ಉತ್ತರ: ಪಕ್ಷದ ಈಗಿನ ನಾಯಕತ್ವವು ಪಕ್ಷದ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾದರೆ ಅದು ಹೆಚ್ಚು ಒಳ್ಳೆಯದು. ನಮ್ಮಲ್ಲಿನ ಜನಪ್ರಿಯ ಗಾದೆ ಮಾತು ಎಂದರೆ, ಮಗುವನ್ನು ನೀರಿಂದ ಹೊರಗೆ ಎಸೆದರೆ, ಏನು ಪ್ರಯೋಜನವಿಲ್ಲ. ಅದೇ ರೀತಿ, ನಾಯಕತ್ವ ಬದಲಾವಣೆಯಿಂದ ಯಾವುದೇ ಪ್ರಯೋಜನವಿಲ್ಲ. ರಾಹುಲ್ ಗಾಂಧಿ ಅವರು ಪಕ್ಷಕ್ಕೆ ಪರ್ಯಾಯ ನಾಯಕತ್ವ ಕಂಡುಕೊಳ್ಳಲು ಎಲ್ಲಾ ಅವಕಾಶಗಳನ್ನು ನೀಡಿದ್ದಾರೆ. ತಾನು ನಾಯಕತ್ವವನ್ನು ತೊರೆಯುತ್ತಿದ್ದೇನೆ ಮತ್ತು ನನ್ನ ತಾಯಿ (ಸೋನಿಯಾ ಗಾಂಧಿ) ಅಥವಾ ಸಹೋದರಿ (ಪ್ರಿಯಾಂಕಾ ಗಾಂಧಿ ವಾದ್ರಾ) ಅಧಿಕಾರ ವಹಿಸಿಕೊಳ್ಳಲು ನಾನು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು ಜೊತೆಗೆ, ಇದಕ್ಕಾಗಿ ಅವರು ಎರಡು ತಿಂಗಳ ಕಾಲ ಅವಕಾಶ ಕೂಡ ನೀಡಿದ್ದರು. ಆದರೆ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಯಾರು ಮುಂದೆ ಬರಲಿಲ್ಲ. ಬಿಜೆಪಿಯ ಗುರಿ ಕಾಂಗ್ರೆಸ್ ಮುಕ್ತ ಭಾರತ. ಕಾಂಗ್ರೆಸ್ ಗಾಂಧಿ ಮುಕ್ತ ಪಕ್ಷವಾದರೆ ಮಾತ್ರ ಇದರಲ್ಲಿ ಅವರು ಯಶಸ್ವಿಯಾಗುತ್ತಾರೆ. ನಾಯಕತ್ವದ ವಿಷಯದಲ್ಲಿ ಪಕ್ಷ ಸಮಯವನ್ನು ವ್ಯರ್ಥ ಮಾಡಬಾರದು. ಇದರಿಂದ ಯಾವುದೇ ಪ್ರಯೋಜನವಿಲ್ಲ.

5)ಹಾಗಾದರೆ ಗಾಂಧಿ ಕುಟುಂಬ ಪಕ್ಷಕ್ಕೆ ಅನಿವಾರ್ಯ ಎಂದು ಹೇಳುತ್ತಿದ್ದೀರಾ? ಮುಂದೆ ಪಕ್ಷವನ್ನು ಬಲಪಡಿಸುವುದು ಹೇಗೆ?

ಉತ್ತರ: ಮೂವರು ಗಾಂಧಿಗಳಲ್ಲಿ ಒಬ್ಬರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂಬುದರಲ್ಲಿ ಎರಡನೇ ಮಾತಿಲ್ಲ. ಅದು ರಾಹುಲ್ ಆಗಿರಬಹುದು, ಅವರು ತಾನು ಪಕ್ಷದ ಸೇವೆಗೆ ಲಭ್ಯನಿದ್ದೇನೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದಾರೆ. …

6)ಪಕ್ಷದ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲದ ವ್ಯಕ್ತಿಯನ್ನು ನಾವು ಹೇಗೆ ಆ ಜವಾಬ್ದಾರಿಯತ್ತ ತಳ್ಳಬಹುದು? …

ಉತ್ತರ: ಬಹುಶಃ ಅವರು ಮನಸ್ಸು ಬದಲಾಯಿಸಬಹುದು ಅಥವಾ ಪ್ರಿಯಾಂಕಾ ಪಕ್ಷವನ್ನು ಮುನ್ನಡೆಸಬಹುದು. ಸೋನಿಯಾ ಗಾಂಧಿ ಅವರ ಅನಾರೋಗ್ಯದ ಹೊರತಾಗಿಯೂ ಪಕ್ಷದ ನೇತೃತ್ವ ವಹಿಸಿಕೊಂಡು ಹೆಜ್ಜೆ ಹಾಕಬಹುದು. ಒಂದು ಪಕ್ಷವಾಗಿ ನಾವು ನಮ್ಮ ಏಕೈಕ ಶತ್ರು ಬಿಜೆಪಿ ಮತ್ತು ಅದರ ಕೇಸರಿ ಪಡೆಗಳು ಎಂದು ದೃಢವಾಗಿ ಹೇಳಬೇಕಿದೆ. ಉಳಿದಂತೆ ನಾವು ನಮ್ಮಿಂದ ದೂರವಾದ ಸಾಮಾಜಿಕ ಗುಂಪುಗಳನ್ನು ಮರಳಿ ನಮ್ಮ ತೆಕ್ಕೆಗೆ ತರಲು ಸಮಾನ ಮನಸ್ಕರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು. ನಾವು ಗಾಂಧಿ ಕುಟುಂಬದ ಅಡಿಯಲ್ಲಿ ಒಂದಾಗಬೇಕು ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಜನರ ಜೊತೆಗೆ ಹೋರಾಡಬೇಕು. ಆ ಮೂಲಕ ನಮ್ಮ ಫಲಿತಾಂಶವನ್ನು ಉತ್ತಮಗೊಳಿಸಬಹುದೇ ಎಂದು ನೋಡಬಹುದು. ನಮ್ಮ ಬಲ ಲೋಕಸಭೆಯಲ್ಲಿ 52 ಸ್ಥಾನಗಳಿಗೆ ಇಳಿದಿರುವುದು ಪಕ್ಷ ದುರ್ಬಲವಾಗಿರುವುದರಿಂದ ಅಲ್ಲ. ಬದಲಿಗೆ ವಿರೋಧ ಪಕ್ಷಗಳ ನಡುವಣ ಒಡಕಿನಿಂದ. 2019 ರಲ್ಲಿ ಬಿಜೆಪಿ ಅಲ್ಲದ ಮತಗಳು ಶೇಕಡಾ 63 ರಷ್ಟಿದ್ದವು. ಆದರೆ ಅವು ಚದುರಿದಂತೆ ಬಿದ್ದವು. ನಾವು ಅವರನ್ನು ಒಟ್ಟಿಗೆ ಸೇರಿಸಬೇಕಾಗಿದೆ, ಒಂದೇ ವೇದಿಕೆ ಅಡಿ ಟಾಕಾ ಬೇಕಿದೆ. ಪ್ರಬಲ ನಾಯಕತ್ವದಡಿ ನಾವು ಒಂದಾದರೆ ಮಾತ್ರ ಪಕ್ಷದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಹುದು. ಗಾಂಧಿ ಕುಟುಂಬ ಮಾತ್ರ ಅಂತಹ ನಾಯಕತ್ವವನ್ನು ನೀಡಬಲ್ಲದು ಎಂದು ನಾನು ನಂಬುತ್ತೇನೆ. ಐದು ತಲೆಮಾರುಗಳ ಗಾಂಧಿಗಳು ಕಾಂಗ್ರೆಸ್ ಅನ್ನು ಮುನ್ನಡೆಸಿದ್ದಾರೆ ಮತ್ತು ಪಕ್ಷದೊಳಗೆ ಒಮ್ಮತವಿಲ್ಲದಿದ್ದರೆ ಬಹುಶಃ ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸದ ಹೊಸ ವ್ಯಕ್ತಿಯನ್ನು ಪ್ರಯತ್ನಿಸುವ ಸಮಯ ಬಂದಿದೆ.

7)ಹಾಗಾದರೆ, ಪ್ರಿಯಾಂಕಾ ಗಾಂಧಿ ವಾದ್ರಾ ನಿಮ್ಮ ಆಯ್ಕೆಯೇ?

ಉತ್ತರ: ಇಲ್ಲ, ನನ್ನ ಆಯ್ಕೆ ಯಾರಾದರು ಗಾಂಧಿಯವರು. ಗಾಂಧಿ ಕುಟುಂಬ ಆರಿಸಿದ ಕುಟುಂಬ ಸದಸ್ಯ.

8)2019 ರಿಂದ ಗಾಂಧಿ ಕುಟುಂಬದ ಹೊರಗಿನ ನಾಯಕರನ್ನು ಪಕ್ಷದ ಅಧ್ಯಕ್ಷ ಹುದ್ದೆಗೆ ತರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅದು ಒಳ್ಳೆಯ ಆಯ್ಕೆಯೇ?

ಉತ್ತರ: ನನ್ನ ಯೌವನದಲ್ಲಿ, ಜನಪ್ರಿಯ ಹಿಂದಿ ಚಲನಚಿತ್ರ ನಟಿ ಮಧುಬಾಲಾ ನನ್ನವಳಾಗಬೇಕು ಎಂಬ ಆಸೆ ಇತ್ತು, ಅದು ಆಗಲಿಲ್ಲ. ಗಾಂಧಿ-ಅಲ್ಲದ ಕಾಂಗ್ರೆಸ್ ಮುಖ್ಯಸ್ಥರನ್ನು ಹೊಂದಬೇಕೆಂಬ ಬೇಡಿಕೆ ಈ ಹಳೆಯ ಆಶಯಕ್ಕೆ ಹೋಲುತ್ತದೆ. ಗಾಂಧಿ ಕುಟುಂಬದ ಸದಸ್ಯರು ಇರುವವರೆಗೂ, ಆ ಕುಟುಂಬದ ಹೊರಗಿನವರು ಆ ಪಟ್ಟಕ್ಕೆ ಏರಲಾರರು

9) ಪಕ್ಷದ ಆಂತರಿಕ ಚುನಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಉತ್ತರ: ಮಾಜಿ (ದಿವಂಗತ) ಪ್ರಧಾನಿ ರಾಜೀವ್ ಗಾಂಧಿ 1990 ರ ದಶಕದಲ್ಲಿ ಇದನ್ನು ಹೇಳುತ್ತಿದ್ದರು ಮತ್ತು ರಾಹುಲ್ 2007 ರಿಂದ ಇದನ್ನು ಹೇಳುತ್ತಿದ್ದಾರೆ. ಇದನ್ನು ಈ ಇಬ್ಬರು ನಾಯಕರು ಭಾರತೀಯ ಯುವ ಕಾಂಗ್ರೆಸ್ ಮತ್ತು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘದಲ್ಲಿ ಅನುಷ್ಠಾನಗೊಳಿಸಿದ್ದಾರೆ. ಈ ಆಂತರಿಕ ಚುನಾವಣೆಗಳು ಕೆಲವು ವಿವಾದಗಳಿಗೆ ತುತ್ತಾಗಿವೆ. ಆದರೆ ಅವು ಪ್ರಾಮುಖ್ಯವಾದುವಲ್ಲ. ಈ ರೀತಿಯ ಚುನಾವಣೆ ಹೊಸತು. ಈ ನಡುವೆ ಪಕ್ಷ ಈ ೨೩ ಹಿರಿಯ ನಾಯಕರು ಮಾಡಿರುವ ಕೆಲವು ಪ್ರಸ್ತಾಪಗಳನ್ನು ಒಪ್ಪಿಕೊಳ್ಳಬಹುದು. ಬಹುತೇಕ ಎಲ್ಲಾ ಪ್ರಸ್ತಾಪಗಳನ್ನು.

Last Updated : Sep 4, 2020, 10:36 AM IST

ABOUT THE AUTHOR

...view details