ಕರ್ನಾಟಕ

karnataka

ETV Bharat / bharat

ಇಂದೂ ED ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ಡಿಕೆಶಿ - ಇಡಿ ಅಧಿಕಾರಿಗಳು

ಇಂದು ಮತ್ತೆ ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಡಿ ಕೆ ಶಿವಕುಮಾರ್​, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವಾಗ, ಇದು 429 ಕೋಟಿ ರೂ.ಅಷ್ಟೇ ಅಲ್ಲ ಇನ್ನಷ್ಟು ವಿಷಯಗಳ ಬಗ್ಗೆ ಮಾಧ್ಯಮಗಳು ಮಾತನಾಡಿವೆ. ಬಹಳಷ್ಟು ಜನ ಬಹಳ ಬಹಳ ಮಾತನಾಡಿದ್ದಾರೆ ಎಂದರು.

ಮಾಜಿ ಸಚಿವ ಡಿ ಕೆ ಶಿವಕುಮಾರ್

By

Published : Sep 2, 2019, 2:48 PM IST

ನವದೆಹಲಿ:ನಾನು ಕ್ರಿಮಿನಲ್​ ಅಲ್ಲ, ಯಾವುದೇ ಕಳ್ಳತನ ಮಾಡಿಲ್ಲ. ಏನೂ ತಪ್ಪು ಮಾಡಿಲ್ಲ. ಯಾವುದೇ ಪರಿಸ್ಥಿತಿಯನ್ನ ಎದುರಿಸಲು ನಾನು ಸಿದ್ಧ. ಎಲ್ಲದಕ್ಕೂ ನಾನಾ ರೆಡಿಯಾಗಿದ್ದೇನೆ.ಇದು ರಾಜಕೀಯ ಷಡ್ಯಂತ್ರ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಆರೋಪಿಸಿದ್ದಾರೆ.

ಇಂದು ಮತ್ತೆ ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಡಿ ಕೆ ಶಿವಕುಮಾರ್​, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಇದು 429 ಕೋಟಿ ರೂ.ಅಷ್ಟೇ ಅಲ್ಲ ಇನ್ನಷ್ಟು ವಿಷಯಗಳ ಬಗ್ಗೆ ಮಾಧ್ಯಮಗಳು ಮಾತನಾಡಿವೆ. ಬಹಳಷ್ಟು ಜನ ಬಹಳ ಬಹಳ ಮಾತನಾಡಿದ್ದಾರೆ. ಅವೆಲ್ಲಕ್ಕೂ ಉತ್ತರ ಕೊಡ್ತೇನಿ.

ಇಡಿ ಅಧಿಕಾರಿಗಳು ಇದಿಷ್ಟೇ ಅಲ್ಲ ಇನ್ನೂ ಬಹಳ ಕೇಳಿದ್ದಾರೆ.ಅವೆಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ ಎಂದು ವಿಚಾರಣೆ ಬಗ್ಗೆ ಹೇಳಿದರು. ಗುಜರಾತ್​ ಹಾಗೂ ಮಹಾರಾಷ್ಟ್ರ ಎಂಎಲ್​ಎಗಳನ್ನ ರಕ್ಷಣೆ ಮಾಡಿದ್ದೇ ದೊಡ್ಡ ಪ್ರಮಾದ ಎಂಬಂತೆ ನೋಡಲಾಗುತ್ತಿದೆ. ಇಷ್ಟಕ್ಕೆಲ್ಲ ಇದುವೇ ಕಾರಣ ಎಲ್ಲವನ್ನೂ ಧೈರ್ಯದಿಂದ ಎದುರಿಸುವ ಶಕ್ತಿ ಇದೆ. ನನ್ನ ಹೃದಯ ಸ್ವಚ್ಛವಾಗಿದೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ನನ್ನ ತಾಯಿ, ಸಂಬಂಧಿಕರು, ಆಪ್ತರಿಗೆ ಬಹಳಷ್ಟು ತೊಂದರೆ ಕೊಡಲಾಗುತ್ತಿದೆ ಎಂದು ಅವರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details