ನವದೆಹಲಿ:ಕೆಲ ದಿನಗಳ ಹಿಂದೆ ಮೋದಿ ಸರ್ಕಾರ ಒಂದಷ್ಟು ನಿರ್ಧಾರಗಳನ್ನು ಬೆಂಬಲಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತಿಗೆ ಇದೀಗ ಮತ್ತೋರ್ವ 'ಕೈ' ನಾಯಕ ಸಹಮತ ಸೂಚಿಸಿದ್ದಾರೆ.
ಪ್ರತಿಯೊಂದು ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರನ್ನು ರಾಕ್ಷಸೀಕರಣಗೊಳಿಸುವುದು ತಪ್ಪು ಎಂದಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಪ್ರಧಾನಿ ಹುದ್ದೆಯಲ್ಲಿರುವವರು ದೇಶವನ್ನು ಪ್ರತಿನಿಧಿಸುತ್ತಾರೆ. ಆ ಸ್ಥಾನದಲ್ಲಿರುವ ವ್ಯಕ್ತಿಯ ನಿರ್ಧಾರಗಳು ಉತ್ತಮವಾಗಿರಬಹುದು ಅಥವಾ ಕೆಟ್ಟದಾಗಿರಬಹುದು. ಆದರೆ, ಅದನ್ನು ಖಂಡಿಸುವ ಮೊದಲು ಯೋಚನೆ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.