ಪಾಟ್ನಾ:ಬಿಹಾರ ವಿಧಾನಸಭೆ ಚುನಾವಣೆಯ ಮಹಾಘಟಬಂಧನ್ ಮೈತ್ರಿಯಲ್ಲಿ ಕಾಂಗ್ರೆಸ್ 70 ಸ್ಥಾನಗಳನ್ನು ಪಡೆದಿದ್ದು, ಮೇಲುಗೈ ಸಾಧಿಸಿದೆ.
ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ರಾಂಚಿ ಜೈಲಿನಲ್ಲಿದ್ದಾರೆ. ಕಾಂಗ್ರೆಸ್, ಜಾರ್ಖಂಡ್‌ನಲ್ಲಿ ಸರ್ಕಾರ ನಡೆಸುತ್ತಿರುವ ಕಾರಣ ಬಿಹಾರದಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಲು ಒತ್ತಡ ತಂತ್ರಗಳನ್ನು ಪ್ರಯೋಗಿಸಿತು ಎಂದು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಮೂಲಗಳು ತಿಳಿಸಿವೆ.
ಆದರೆ, ಆರ್‌ಜೆಡಿ ಆರಂಭದಲ್ಲಿ ಕಾಂಗ್ರೆಸ್‌ಗೆ 58ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಲು ಒಪ್ಪಲಿಲ್ಲ ಎಂದು ಮೂಲಗಳು ತಿಳಿಸಿವೆ. 2015ರ ವಿಧಾನಸಭಾ ಚುನಾವಣೆಯಲ್ಲಿ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 27 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಬಿಹಾರ ಮಹಾಘಟಬಂಧನ್: 'ಕೈ'ಗೆ 70, ಆರ್‌ಜೆಡಿ 144 ಕ್ಷೇತ್ರಗಳಲ್ಲಿ ಸ್ಪರ್ಧೆ, ತೇಜಸ್ವಿ ಸಿಎಂ ಅಭ್ಯರ್ಥಿ!
ಆರ್‌ಜೆಡಿ 150 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೆ, ಸಿಪಿಐ(ಎಂಎಲ್)ಗೆ ಇನ್ನೂ ನಾಲ್ಕು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಆರ್‌ಜೆಡಿ 15 ಕ್ಕೂ ಹೆಚ್ಚು ಸ್ಥಾನಗಳನ್ನು ಹಂಚಿಕೊಳ್ಳಲು ಸಿದ್ಧರಿಲ್ಲ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಸಿಪಿಐ (ಎಂಎಲ್) ಜೊತೆ ಸೀಟು ಹಂಚಿಕೆಯಲ್ಲಿ ರಾಜಿ ಮಾಡಿಕೊಳ್ಳುವುದು ಇತರ ಎರಡು ಮೈತ್ರಿ ಪಾಲುದಾರರಾದ ವಿಐಪಿ ಮತ್ತು ಜೆಎಂಎಂ ಅನ್ನು ನಿರ್ಲಕ್ಷಿಸಿರುವುದರಿಂದ ಆರ್ಜೆಡಿಗೆ ಇದು ದುಬಾರಿಯಾಗಿದೆ. ವಿಐಪಿ ಅಧ್ಯಕ್ಷ ಮುಖೇಶ್ ಸಹಾನಿ ಅವರು ಸೀಟು ಹಂಚಿಕೆ ಸೂತ್ರವನ್ನು ಬಹಿರಂಗವಾಗಿ ಆಕ್ಷೇಪಿಸಿದರು ಮತ್ತು ಮಾಧ್ಯಮಗೋಷ್ಟಿಯಿಂದ ಹೊರನಡೆದರು ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಬಿಹಾರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ಎನ್‌ಡಿಎ ಸರ್ಕಾರವನ್ನು ಕಟ್ಟಿಹಾಕಲು ಕೆಲವು ಭಿನ್ನಾಭಿಪ್ರಾಯಗಳಿದ್ದರೂ ತಮ್ಮ ಪಕ್ಷವು ಆರ್‌ಜೆಡಿಯೊಂದಿಗೆ ಕೈಜೋಡಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.