ಕರ್ನಾಟಕ

karnataka

ETV Bharat / bharat

ಹಿಂದಿನ ಕಾಂಗ್ರೆಸ್‌ ಸರ್ಕಾರ ರೈತರ ಪರ ಎಪಿಎಂಸಿ ಕಾಯ್ದೆ ಜಾರಿ ಮಾಡಿತ್ತು ; ದಿಗ್ವಿಜಯ್‌ ಸಿಂಗ್ - ಎಪಿಎಂಸಿ ಕಾಯ್ದೆ

2004ರಲ್ಲಿ ಯುಪಿಎ ಸರ್ಕಾರ ಮಾದರಿ ಎಂಪಿಎಂಸಿ ಕಾಯ್ದೆ-2003 ಮತ್ತು ಮಾದರಿ ಎಪಿಎಂಸಿ ನಿಯಮಗಳು-2007 ಜಾರಿಗೆ ತಂದಿತ್ತು. 2013ರಲ್ಲಿ ಕೃಷಿ ಉತ್ಪನ್ನ ಅಂತರ್‌ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯನ್ನು ಸಮಿತಿ ಶಿಫಾರಸು ಮಾಡಿತ್ತು..

congress-govt-had-made-apmc-act-in-favour-of-farmers-digvijay
ಹಿಂದಿನ ಕಾಂಗ್ರೆಸ್‌ ಸರ್ಕಾರ ರೈತರ ಪರ ಎಪಿಎಂಸಿ ಕಾಯ್ದೆ ಜಾರಿ ಮಾಡಿತ್ತು; ದಿಗ್ವಿಜಯ್‌ ಸಿಂಗ್

By

Published : Sep 18, 2020, 3:41 PM IST

ಭೋಪಾಲ್(ಮಧ್ಯಪ್ರದೇಶ): ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಎಪಿಎಂಸಿ ಕಾಯ್ದೆಯನ್ನು ರೈತರ ಪರ ಜಾರಿ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರುತ್ತಿರುವ ಕಾಯ್ದೆ ರೈತ ವಿರೋಧಿ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದಾರೆ.

ಇದೀಗ ದೊಡ್ಡ ವ್ಯಾಪಾರದ ಮಂಡಿಯನ್ನು ಆರಂಭಿಸಬಹುದು ಮತ್ತು ಈ ರೈತರ ವಿರೋಧಿ ಕಾಯ್ದೆಯಡಿ ಯಾವುದೇ ಮಂಡಿಗಳಲ್ಲಿ ಯಾವುದೇ ಸಮಸ್ಯೆಯಾದ್ರೂ ಅದನ್ನು ಅಧಿಕಾರಿಗಳು ನಿರ್ವಹಿಸುತ್ತಾರೆ. ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವ ಈ ಎಲ್ಲಾ 4 ಕಾಯ್ದೆಗಳು ಒಟ್ಟಾಗಿ ನೋಡಬಹುದು ಎಂದಿದ್ದಾರೆ.

2004ರಲ್ಲಿ ಯುಪಿಎ ಸರ್ಕಾರ ಮಾದರಿ ಎಂಪಿಎಂಸಿ ಕಾಯ್ದೆ-2003 ಮತ್ತು ಮಾದರಿ ಎಪಿಎಂಸಿ ನಿಯಮಗಳು-2007 ಜಾರಿಗೆ ತಂದಿತ್ತು. 2013ರಲ್ಲಿ ಕೃಷಿ ಉತ್ಪನ್ನ ಅಂತರ್‌ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯನ್ನು ಸಮಿತಿ ಶಿಫಾರಸು ಮಾಡಿತ್ತು.

ಕಾಯ್ದೆಯಡಿ ಯಾವುದೇ ಅಡೆತಡೆಗಳು ಇಲ್ಲದೆ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಜೂನ್‌ 5ರಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಮೂರು ಕಾಯ್ದೆಗಳ ವಿರುದ್ಧ ಪಂಜಾಬ್‌ ಮತ್ತು ಹರಿಯಾಣದಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸದ್ಯ ಲೋಕಸಭೆಯಲ್ಲಿ ಈ ಮೂರು ಮಸೂದೆಗಳನ್ನ ಅಂಗೀಕರಿಸಲಾಗಿದೆ.

ABOUT THE AUTHOR

...view details