ಉನ್ನಾವೋ( ಉತ್ತರಪ್ರದೇಶ): ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ನಡುವೆ ಉನ್ನಾವೋಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಲಿದ್ದಾರೆ.
ಸಂತ್ರಸ್ತೆ ಸಾವು: ಉನ್ನಾವೋಕ್ಕೆ ಪ್ರಿಯಾಂಕಾ ಗಾಂಧಿ! - ಉನ್ನಾವೋ ರೇಪ್ ಸಂತ್ರಸ್ತೆ ಸಾವು
ಉನ್ನಾವೋ ರೇಪ್ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಉನ್ನಾವೋಗೆ ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದಾರೆ. ಸಂತ್ರಸ್ತೆಯ ಪೋಷಕರನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡಲಿದ್ದಾರೆ.
ಉನ್ನಾವೋಕ್ಕೆ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಅವರು ಲಖನೌದಿಂದ ಸದ್ಯ ಉನ್ನಾವೋದತ್ತ ತೆರಳಿದ್ದಾರೆ. ಈ ನಡುವೆ ಉನ್ನಾವೋ ರೇಪ್ ಸಂತ್ರಸ್ತೆ ಸಾವಿಗೆ ಉತ್ತರ ಪ್ರದೇಶ ಡಿಸಿಎಂ ಸಂತಾಪ ಸೂಚಿಸಿದ್ದು, ಇದು ದುರದೃಷ್ಟಕರ ಎಂದಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು ಎಂದಿರುವ ಅವರು, ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಆರೋಪಿಗಳಿಗೆ ಶೀಘ್ರ ಶಿಕ್ಷೆಯನ್ನ ನೀಡಲಾಗುವುದು ಎಂದು ಸಂತ್ರಸ್ತೆ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.