ಕರ್ನಾಟಕ

karnataka

ETV Bharat / bharat

ಆಪ್​, ಬಿಜೆಪಿ ಆಯ್ತು ಇದೀಗ 'ಕೈ' ಸರದಿ: ದೆಹಲಿ ಫೈಟ್​ಗೆ 54 ಕ್ಷೇತ್ರಗಳಿಗೆ ಹುರಿಯಾಳುಗಳ ಘೋಷಣೆ - ಕಾಂಗ್ರೆಸ್​ ಫಸ್ಟ್​ ಲಿಸ್ಟ್​ ರಿಲೀಸ್​​

ದೆಹಲಿ ಚುನಾವಣಾ ಕಣ ರಂಗೇರುತ್ತಿದ್ದು ಆಮ್​ ಆದ್ಮಿ, ಬಿಜೆಪಿ ನಂತರ ಇದೀಗ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಮಾಡಿದೆ.

Delhi Assembly polls
ಕಾಂಗ್ರೆಸ್​ ಪಟ್ಟಿ ರಿಲೀಸ್​

By

Published : Jan 18, 2020, 9:53 PM IST

ನವದೆಹಲಿ: 70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ಮುಂದಿನ ತಿಂಗಳು ಫೆ. 8ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಆಮ್​ ಆದ್ಮಿ ಹಾಗೂ ಬಿಜೆಪಿ ಮೊದಲ ಲಿಸ್ಟ್​ ರಿಲೀಸ್​ ಮಾಡಿವೆ. ಇಂದು ಕಾಂಗ್ರೆಸ್​ ಕೂಡ ತನ್ನ ಮೊದಲ ಪಟ್ಟಿ ರಿಲೀಸ್​ ಮಾಡಿದೆ.

70 ಕ್ಷೇತ್ರಗಳ ಪೈಕಿ 54 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿ ಪಟ್ಟಿ ರಿಲೀಸ್​ ಮಾಡಿದ್ದು, ಆಪ್​ನಿಂದ ಕಾಂಗ್ರೆಸ್​ ಸೇರಿಕೊಂಡಿದ್ದ ಅಲ್ಕಾ ಲಾಂಬಾ ಚಾಂದಿನಿ ಚೌಕ್​ನಿಂದ ಕಣಕ್ಕಿಳಿಯಲಿದ್ದಾರೆ. ಕೀರ್ತಿ ಆಜಾದ್​ ಪತ್ನಿ ಪೂನಂ ಆಜಾದ್​​ ಸಂಗಮ್​ ವಿಹಾರದಿಂದ ಕಣಕ್ಕಿಳಿಯಲಿದ್ದಾರೆ.

ದೆಹಲಿ ಮಾಜಿ ಸಚಿವ ಅಶೋಕ್​ ಕುಮಾರ್​ ಕೃಷ್ಣ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಅರವಿಂದ್​ ಕೇಜ್ರಿವಾಲ್​ ಸ್ಪರ್ಧೆ ಮಾಡುತ್ತಿರುವ ನವದೆಹಲಿ ಕ್ಷೇತ್ರಕ್ಕೆ ಕಾಂಗ್ರೆಸ್​ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆಮ್​ ಆದ್ಮಿ ಪಕ್ಷ ಎಲ್ಲ 70 ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆ ಮಾಡಿದ್ದು, ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಿಸಿದೆ.

ABOUT THE AUTHOR

...view details