ಪಣಜಿ (ಗೋವಾ):ದೆಹಲಿಯಿಂದ ರೈಲಿನಲ್ಲಿ ಗೋವಾಕ್ಕೆ ಆಗಮಿಸಿದ ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ದಕ್ಷಿಣ ಗೋವಾದ ಜವಾಹರಲಾಲ್ ನೆಹರೂ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕುರ್ಚಿಗಳ ಮೇಲೆ ಮಲಗಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲಿ ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಗೋವಾಕ್ಕೆ ಮರಳಿದವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿಲ್ಲ: ಕಾಂಗ್ರೆಸ್ ಆರೋಪ - ಪ್ರತಿಪಕ್ಷ ನಾಯಕ ದಿಗಂಬರ್ ಕಾಮತ್
ದೆಹಲಿಯಿಂದ ಗೋವಾಕ್ಕೆ ಆಗಮಿಸಿದ ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಕುರ್ಚಿಗಳ ಮೇಲೆ ಮಲಗಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿದೆ.
ಪ್ರತಿಪಕ್ಷ ನಾಯಕ ದಿಗಂಬರ್ ಕಾಮತ್ ಮಾತನಾಡಿ, "ಗೋವಾಕ್ಕೆ ಮರಳಿ ಬರುವ ಸ್ಥಳೀಯ ನಿವಾಸಿಗಳನ್ನು ಗೋವಾ ಸರ್ಕಾರವು ಮಾನವೀಯತೆಯ ಪ್ರಜ್ಞೆಯೊಂದಿಗೆ ಪರಿಗಣಿಸಬೇಕು. ನಿನ್ನೆ ನವದೆಹಲಿಯಿಂದ ಮಡ್ಗಾಂವ್ ನಿಲ್ದಾಣಕ್ಕೆ ಆಗಮಿಸಿದ ಹಲವರ ಕುರಿತು ಮಲತಾಯಿ ಧೋರಣೆ ತೋರಲಾಗಿದೆ ಎಂದು ತಿಳಿದು ಆಘಾತವಾಗಿದೆ" ಎಂದರು.
ಕೋವಿಡ್-19 ಪರೀಕ್ಷೆಯ ವರದಿ ಬರುವವೆರಗೂ ಅವರನ್ನು ಕ್ವಾರಂಟೈನ್ನಲ್ಲಿರಿಸಿ ಬಳಿಕ ನೆಗೆಟಿವ್ ಬಂದ ಬಳಿಕ ಮನೆಗೆ ಕಳುಹಿಸಲಾಗಿತ್ತು. ಈ ಅವ್ಯವಸ್ಥೆಯ ಕುರಿತು ಪ್ರತಿಕ್ರಿಯಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ಇನ್ನು ಮುಂದೆ ಗೋವಾಗೆ ಮರಳುವವರನ್ನು ಫುಟ್ಬಾಲ್ ಕ್ರೀಡಾಂಗಣದ ಬದಲು ಹೋಟೆಲ್‌ಗಳಿಗೆ ಕರೆದೊಯ್ಯಲಾಗುವುದು. ಅಲ್ಲಿಯೇ ಅವರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು" ಎಂದು ಹೇಳಿದ್ದಾರೆ.