ಕರ್ನಾಟಕ

karnataka

ETV Bharat / bharat

ನಾಳೆ ಎಐಸಿಸಿ ಅಧ್ಯಕ್ಷರ ನೇಮಕ... ರೇಸ್​​ನಲ್ಲಿ ಮಲ್ಲಿಕಾರ್ಜುನ​ ಖರ್ಗೆ,ಮುಕುಲ್ ವಾಸ್ನಿಕ್! - ಮಲ್ಲಿಕಾರ್ಜುನ್​ ಖರ್ಗೆ

ಕಳೆದ ತಿಂಗಳಿಂದ ಖಾಲಿ ಉಳಿದಿರುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಳೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ರೇಸ್​​ನಲ್ಲಿ ಮಲ್ಲಿಕಾರ್ಜುನ​ ಖರ್ಗೆ, ಮುಕುಲ್​ ವಾಸ್ನಿಕ್​ ಇರುವುದಾಗಿ ತಿಳಿದು ಬಂದಿದೆ.

ಮಲ್ಲಿಕಾರ್ಜುನ್​ ಖರ್ಗೆ/ Mallikarjun Kharge

By

Published : Aug 9, 2019, 9:24 PM IST

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ದಿಢೀರ್​ ರಾಜೀನಾಮೆ ನೀಡಿದ ಬಳಿಕ ತೆರವಾಗಿರುವ ಸ್ಥಾನಕ್ಕೆ ನಾಳೆ ಆಯ್ಕೆ ನಡೆಯಲಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಕರ್ನಾಟಕದ ಕಾಂಗ್ರೆಸ್​​ನ ಹಿರಿಯ ಮುಖಂಡ ಮಲ್ಲಿಕಾರ್ಜುನ​ ಖರ್ಗೆ ಹಾಗೂ ಮಹಾರಾಷ್ಟ್ರದ ಮುಕುಲ್​ ವಾಸ್ನಿಕ್​​ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆ ನವದೆಹಲಿಯಲ್ಲಿ ಪಕ್ಷದ ಕಾರ್ಯಕಾರಣಿ ಸಭೆ (ಸಿಡಬ್ಲೂಸಿ) ನಡೆಯಲಿದ್ದು, ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಹ ನಡೆಯಲಿದೆ. ಗಾಂಧಿ ಕುಟುಂಬದೊಂದಿಗೆ ನಿಕಟ ಸಂಪರ್ಕ ಹಾಗೂ ಪಕ್ಷದ ಶಿಸ್ತಿನ ಸಿಪಾಯಿ ಎಂದು ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ​ ಖರ್ಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್​​ ಪಕ್ಷದ ಹಿರಿಯ ಮುಖಂಡರಾಗಿದ್ದು, 16ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನು 57 ವರ್ಷದ ಮುಕುಲ್​ ವಾಸ್ನಿಕ್​ ಕೂಡ ಮಹಾರಾಷ್ಟ್ರದ ದಲಿತ ಕಾಂಗ್ರೆಸ್​ ಮುಖಂಡರಾಗಿದ್ದು, ಈ ಹಿಂದೆ ಸೋನಿಯಾ ಗಾಂಧಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇವರಿಗೂ ಪಕ್ಷ ಸಂಘಟನೆ ಅನುಭವ ಇರುವ ಕಾರಣ ಕಾಂಗ್ರೆಸ್​ ಮಣೆ ಹಾಕಬಹುದು ಎಂದು ತಿಳಿದು ಬಂದಿದೆ. ಈಗಾಗಲೇ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಪಕ್ಷದ ಹಿರಿಯ ಮುಖಂಡರಾಗಿರುವ ಅಹ್ಮದ್​ ಪಟೇಲ್​, ಎಕೆ ಆ್ಯಂಟನಿ ಹಾಗೂ ಕೆಸಿ ವೇಣುಗೋಪಾಲ್​ ಭೇಟಿ ಮಾಡಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದೆ.

ಮತ್ತೊಂದು ಮಾಹಿತಿ ಪ್ರಕಾರ ಮಧ್ಯಪ್ರದೇಶದ ಯುವ ಕಾಂಗ್ರೆಸ್​ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರು ಸಹ ಈ ರೇಸ್​​ನಲ್ಲಿದ್ದು, ರಾಹುಲ್​ ಗಾಂಧಿ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಆರ್ಟಿಕಲ್​ 370 ರದ್ಧತಿ ನಡೆಗೆ ಮೋದಿ ಪರ ಜೈಕಾರ ಹಾಕಿರುವುದು ಅವರಿಗೆ ಮುಳುವಾಗುವ ಸಾಧ್ಯತೆ ಇದೆ.

ABOUT THE AUTHOR

...view details