ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಚಿನ್ ಪೈಲಟ್ ಬಣದ ಶಾಸಕನ ನಡುವೆ ನಡೆದಿದೆ ಎನ್ನಲಾದ ಚರ್ಚೆಯ ಮೂರು ಆಡಿಯೋ ತುಣುಕುಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಬಿಡುಗಡೆ ಮಾಡಿರುವ ಈ ಆಡಿಯೋ ತುಣುಕುಗಳು ಬಿಜೆಪಿಯ ಶೇಖಾವತ್ ಮತ್ತು ಪೈಲಟ್ ಬಣದ ಶಾಸಕ ಭನ್ವರ್ಲಾಲ್ ಶರ್ಮಾ ನಡುವಿನ ಸಂಭಾಷಣೆಯದ್ದಾಗಿದೆ ಎಂದು ಹೇಳಲಾಗ್ತಿದೆ. ಜೈಪುರ ನಿವಾಸಿ ಸಂಜಯ್ ಜೈನ್ ಮೂಲಕ ಶೇಖಾವತ್ ಅವರು ಕಾಂಗ್ರೆಸ್ ಶಾಸಕ ಭನ್ವರ್ಲಾಲ್ ಶರ್ಮಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ಗೆಹ್ಲೋಟ್ ಬಣ ಆರೋಪಿಸಿದೆ.