ಕರ್ನಾಟಕ

karnataka

ETV Bharat / bharat

ಮೋದಿ ಭಾಷಣದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ದೃಢವಾದ ಕ್ರಮಗಳಿಲ್ಲ: ಕಾಂಗ್ರೆಸ್ ಟೀಕೆ - corona news

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಕಾಂಗ್ರೆಸ್​ನ ಹಿರಿಯ ಮುಖಂಡ ಪಿ.ಚಿದಂಬರಂ
ಕಾಂಗ್ರೆಸ್​ನ ಹಿರಿಯ ಮುಖಂಡ ಪಿ.ಚಿದಂಬರಂ

By

Published : Apr 14, 2020, 1:45 PM IST

ನವದೆಹಲಿ: 21 ದಿನಗಳ ಲಾಕ್‌ಡೌನ್‌ನ ಕೊನೆಯ ದಿನದಂದು ಪಿಎಂ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದೆ.

ಕಾಂಗ್ರೆಸ್​ನ ಹಿರಿಯ ಮುಖಂಡ ಪಿ.ಚಿದಂಬರಂ ತಮ್ಮ ನಿಲುವು ತಿಳಿಸಿದ್ದು, ಆರ್ಥಿಕತೆಯ ಪುನರುಜ್ಜೀವನಕ್ಕೆ ದೃಢವಾದ ಕ್ರಮಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. 21 + 19 ದಿನಗಳವರೆಗೆ ಬಡವರನ್ನು ಬಳಲುವಂತೆ ಮಾಡಿರುವುದು ಖಂಡನಾರ್ಹ ಎಂದು ಟ್ವೀಟ್​ ಮೂಲಕ ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಪ್ರಧಾನಿ ಅವರ ಲಾಕ್‌ಡೌನ್ ಅವಧಿ ವಿಸ್ತರಣೆಯ ಘೋಷಣೆ ಡೆನ್ಮಾರ್ಕ್‌ ಪ್ರಿನ್ಸ್ ಇಲ್ಲದ ಹ್ಯಾಮ್ಲೆಟ್ ನಾಟಕದಂತೆ ಇದೆ ಎಂದಿದ್ದಾರೆ. ಹಣಕಾಸಿನ ಪ್ಯಾಕೇಜ್ ಇಲ್ಲ, ಯಾವುದೇ ವಿವರಗಳಿಲ್ಲ, ವಾಸ್ತವಿಕ ಮಾಹಿತಿ ಇಲ್ಲ. ಯಾವ ಅಭಿವೃದ್ಧಿಯ ವಿಷಯವೂ ಇಲ್ಲ, ಇದೆಲ್ಲವೂ ಟೊಳ್ಳು ಎಂದ ಅವರು ಮೋದಿ ಭಾಷಣವನ್ನು ಕುಹಕವಾಡಿದ್ದಾರೆ.

ABOUT THE AUTHOR

...view details