ಕರ್ನಾಟಕ

karnataka

ETV Bharat / bharat

ಗುಜರಾತ್‌ನಲ್ಲಿ 'ಹಸ್ತ'ವ್ಯಸ್ತವಾಗುವ ಆತಂಕ: 15 ಶಾಸಕರನ್ನು ರೆಸಾರ್ಟ್​​ನಲ್ಲಿರಿಸಿದ ಕಾಂಗ್ರೆಸ್ - ಏರೀಸ್​ ರಿವರ್​ಸೈಡ್

ಗುಜರಾತ್​ನಲ್ಲಿ ರೆಸಾರ್ಟ್​ ರಾಜಕೀಯ ಆರಂಭವಾಗಿದೆ. ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಮೂವರು ಶಾಸಕರು ವೈಲ್ಡ್​ ವಿಂಡ್ಸ್​ ರೆಸಾರ್ಟ್​ ತಲುಪಿದ್ರೆ, 15 ಶಾಸಕರನ್ನು ಕಾಂಗ್ರೆಸ್​ ಆನಂದ್ ಜಿಲ್ಲೆಯಲ್ಲಿರುವ ಏರೀಸ್​ ರಿವರ್​ಸೈಡ್ ರೆಸಾರ್ಟ್​​ನಲ್ಲಿರಿಸಿದೆ.

congress
ಕಾಂಗ್ರೆಸ್​

By

Published : Jun 7, 2020, 11:40 AM IST

ಗಾಂಧಿನಗರ (ಗುಜರಾತ್​): ತಮ್ಮ ಶಾಸಕರು ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ತನ್ನ 15 ಶಾಸಕರನ್ನು ಆನಂದ್ ಜಿಲ್ಲೆಯ ರೆಸಾರ್ಟ್​​ವೊಂದಕ್ಕೆ ರವಾನಿಸಿದೆ. ಕಾಂಗ್ರೆಸ್​ ನಾಯಕ ಭರತ್​ ಸಿಂಗ್ ಸೋಲಂಕಿಗ ಅವರಿಗೆ ಈ ಎಲ್ಲಾ ಶಾಸಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆ.

ರಾಜ್ಯಸಭಾ ಚುನಾವಣೆ ಜೂನ್ 19ರಂದು ನಡೆಯಲಿದ್ದು, ಮೂವರು ಕಾಂಗ್ರೆಸ್​ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದರಿಂದ ಭೀತಿಗೊಳಗಾದ ಕಾಂಗ್ರೆಸ್​ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ಸಲುವಾಗಿ ಆನಂದ್ ಜಿಲ್ಲೆಯಲ್ಲಿರುವ ಏರೀಸ್​ ರಿವರ್​ಸೈಡ್ ರೆಸಾರ್ಟ್​ಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ.

ಹಿರಿಯ ಕಾಂಗ್ರೆಸ್​ ನಾಯಕ ಸೋಲಂಕಿ ರೆಸಾರ್ಟ್​ನಲ್ಲಿರುವ ಶಾಸಕರ ಜೊತೆ ಮಾತುಕತೆ ನಡೆಸುತ್ತಿದ್ದು, ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುತ್ತಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಕ್ಷಯ್ ಪಟೇಲ್, ಜಿತು ಚೌಧರಿ ಮತ್ತು ಬ್ರಿಜೇಶ್​ ಮೆರ್ಜಾ ರಾಜಸ್ಥಾನದ ಅಬು ರೋಡ್ ನಗರದಲ್ಲಿರುವ ವೈಲ್ಡ್​ ವಿಂಡ್ಸ್​ ರೆಸಾರ್ಟ್​ ತಲುಪಿದ್ದು, ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ABOUT THE AUTHOR

...view details