ನವದೆಹಲಿ:ಕೊರೊನಾ ಸೋಂಕಿಗೆ ಒಳಗಾಗಿದ್ದ ಗಾಜಿಯಾಬಾದ್ ಮಾಜಿ ಸಂಸದ ಮತ್ತು ಕಾಂಗ್ರೆಸ್ ಮುಖಂಡ ಸುರೇಂದ್ರ ಪ್ರಕಾಶ್ ಗೋಯಲ್ ಇಂದು ನಿಧನರಾದರು.
ಕೋವಿಡ್ಗೆ ಕಾಂಗ್ರೆಸ್ ಮುಖಂಡ ಬಲಿ! - ಗಾಜಿಯಾಬಾದ್ ಮಾಜಿ ಸಂಸದ ಮತ್ತು ಕಾಂಗ್ರೆಸ್ ಮುಖಂಡ ಸುರೇಂದ್ರ ಪ್ರಕಾಶ್ ಗೋಯ
ಕೊರೊನಾ ವಿರುದ್ಧ ಹೋರಾಡುತ್ತಿದ್ದ ಗಾಜಿಯಾಬಾದ್ ಮಾಜಿ ಸಂಸದ ಮತ್ತು ಕಾಂಗ್ರೆಸ್ ಮುಖಂಡ ಸುರೇಂದ್ರ ಪ್ರಕಾಶ್ ಗೋಯಲ್ ಮೃತಪಟ್ಟಿದ್ದಾರೆ.
ಗೋಯಲ್ ಅವರ ಸಾವಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್, "ಸಂಸದರಾಗಿ ಗಾಜಿಯಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀ ಸುರೇಂದ್ರ ಪ್ರಕಾಶ್ ಗೋಯಲ್ ಅವರು ನಿಧನ ಹೊಂದಿದ್ದಾರೆ ಎಂಬ ವಿಷಾದಕರ ಸುದ್ದಿ ಬಂದಿದೆ. ಇವರು ಕೊರೊನಾ ವಿರುದ್ಧ ಹೋರಾಡುತ್ತಿದ್ದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ನಿಂದ ಟಿಕೆಟ್ ಪಡೆದು 2004ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್-ಹಾಪುರದಿಂದ ಸ್ಪರ್ಧಿಸಿದ್ದ ಗೋಯಲ್, ಗೆಲುವಿನ ನಗೆ ಬೀರಿದ್ದರು. ಬಳಿಕ 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಇವರನ್ನು ಸೋಲಿಸಿದ್ದರು.