ಕರ್ನಾಟಕ

karnataka

ETV Bharat / bharat

ಉಪಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಳೇ ಚಾಳಿ ಮುಂದುವರೆಸಿದೆ: ಕೆ.ಸಿ. ವೇಣುಗೋಪಾಲ್ - ಕಾಂಗ್ರೆಸ್​ ವಕ್ತಾರ ಕೆ.ಸಿ ವೇಣುಗೋಪಾಲ್ ಟ್ವೀಟ್

ಡಿ.ಕೆ. ಸಹೋದರರ ಮನೆ ಮೇಲೆ ಸಿಬಿಐ ದಾಳಿ ಕುರಿತು ಕಾಂಗ್ರೆಸ್​ ವಕ್ತಾರ ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿದ್ದು, ಸಿಬಿಐ ದಾಳಿ ಬಿಜೆಪಿ ಪ್ರೇರಿತ ಎಂದು ಆರೋಪಿಸಿದ್ದಾರೆ.

KC Venugopal Reaction about CBI Ride on DK Brothers Residence
ಸಿಬಿಐ ದಾಳಿ ಬಗ್ಗೆ ಕೆ.ಸಿ ವೇಣುಗೋಪಾಲ್ ಪ್ರತಿಕ್ರಿಯೆ

By

Published : Oct 5, 2020, 4:37 PM IST

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮತ್ತು ಸಂಸದ ಡಿ.ಕೆ. ಸುರೇಶ್​ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸುವ ಮೂಲಕ ನಮ್ಮ ಪ್ರಯತ್ನಗಳನ್ನು ತಡೆಯುವ ಬಿಜೆಪಿಯ ತಂತ್ರ ನಮ್ಮನ್ನು ಮತ್ತಷ್ಟು ಬಲ ಪಡಿಸುತ್ತದೆ ಎಂದು ಕಾಂಗ್ರೆಸ್​ ವಕ್ತಾರ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಡಿ.ಕೆ. ಸಹೋದರರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆದಿರುವ ಬಗ್ಗೆ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಉಪಚುನಾವಣೆ ಸಮೀಪಿಸುತ್ತಿದೆ. ಆಶ್ಚರ್ಯವೇನಿಲ್ಲ, ಬಿಜೆಪಿ ತನ್ನ ಅದೇ ಹಳೆ ಚಾಳಿಯನ್ನು ಮುಂದುವರೆಸಿದೆ. ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿದ್ದಾರೆ.

ABOUT THE AUTHOR

...view details