ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಮುಳುಗುವ ಹಡಗು, ಅದರಲ್ಲಿರುವವರು ಮುಳುಗಬೇಕು ಇಲ್ಲಾ ಜಿಗಿಯಬೇಕು: ಮೋದಿ - ಪ್ರಧಾನಿ ಮೋದಿ

ಟೈಟಾನಿಕ್​ನಂತೆ ಕಾಂಗ್ರೆಸ್ ಮುಳುಗುವ ಹಡಗು. ಅದರ ಮೇಲಿರುವ ಪ್ರಯಾಣಿಕರು ಮುಳುಗಬೇಕು ಅಥವಾ ಇನ್ನೊಂದು ಪಕ್ಷಕ್ಕೆ ಜಿಗಿಯಬೇಕು - ಪ್ರಧಾನಿ ನರೇಂದ್ರ ಮೋದಿ ಟೀಕೆ

ಪ್ರಧಾನಿ ಮೋದಿ

By

Published : Apr 7, 2019, 7:10 AM IST

ನಾಂದೇಡ್ (ಮಹಾರಾಷ್ಟ್ರ): ಕಾಂಗ್ರೆಸ್ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದು ಮುಳುಗುವ ಹಡಗಿದ್ದಂತೆ ಎಂದು ಜರಿದಿದ್ದಾರೆ.

ಮಹಾರಾಷ್ಟ್ರದ ನಾಂದೇಡ್​ನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಟೈಟಾನಿಕ್​ನಂತೆ ಕಾಂಗ್ರೆಸ್ ಮುಳುಗುವ ಹಡಗು. ಇದರ ಮೇಲಿರುವ ಎಲ್ಲರನ್ನು ತನ್ನ ಜೊತೆ ಮುಳುಗಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 44 ಕ್ಷೇತ್ರಗಳನ್ನು ಕಾಂಗ್ರೆಸ್ ಜಯಿಸಿದೆ. ಈ ಸಲ ಪರಿಸ್ಥಿತಿ ಇನ್ನೂ ಕೆಟ್ಟದಾಗಿರಲಿದೆ. ಟೈಟಾನಿಕ್ ರೀತಿ ಪ್ರತಿ ದಿನ ನಿಧಾನವಾಗಿ ಕೆಳಗಿಳಿಯುತ್ತಿದೆ. ಕಾಂಗ್ರೆಸ್​ ಮೇಲಿರುವವರು ಅದರ ಜೊತೆ ಮುಳುಗಬೇಕು ಅಥವಾ ಬೇರೆ ಪಕ್ಷಕ್ಕೆ ಜಿಗಿಯಬೇಕಾದ ಸ್ಥಿತಿ ಬಂದಿದೆ ಎಂದರು.

ಕಾಂಗ್ರೆಸ್​​ನ ಹಿರಿಯ ನಾಯಕರಾದ ಶರದ್ ಪವಾರ್, ಪ್ರಫುಲ್ ಪಟೇಲ್, ರಾಜೀವ್ ಸತವ್ ಸೇರಿದಂತೆ ಹಲವರು ಚುನಾವಣಾ ಕಣದಿಂದಲೇ ಓಡಿ ಹೋಗಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷವೇ ಸಂದಿಗ್ಧ ಸ್ಥಿತಿಯಲ್ಲಿದೆ. ಅಮೇಥಿಯಲ್ಲಿ ಅಸ್ಥಿರತೆ ಕಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಯನಾಡಿಗೆ ಪಲಾಯನ ಮಾಡಿದ್ದಾರೆ. ಹಿಂದೂಗಳ ಅಲ್ಪಸಂಖ್ಯಾತರಾಗಿರುವ ಕ್ಷೇತ್ರಕ್ಕೆ ಓಡಿ ಹೋಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ಅವಮಾನ ಮಾಡಿರುವುದನ್ನು ಅಮೇಥಿ ಜನರು ನೆನಪಿಟ್ಟುಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

ABOUT THE AUTHOR

...view details