ನವದೆಹಲಿ: ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಸಚಿನ್ ಪೈಲಟ್ ವಾಪಸಾತಿಯೊಂದಿಗೆ ಮುಕ್ತಾಯ ಕಂಡಿದೆ. ಪೈಲಟ್ ಘರ್ ವಾಪಸಿ ಬಳಿಕ ಬಿಕ್ಕಟ್ಟು ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಘೋಷಿಸಿದೆ.
ಎಲ್ಲವೂ ಇನ್ಮುಂದೆ ಸುಗಮವಾಗಿ ನಡೆಯಲಿದೆ ಎಂದು ಕಾಂಗ್ರೆಸ್ ಸಂತಸ ಕೂಡಾ ವ್ಯಕ್ತಪಡಿಸಿದೆ. ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಸುಖಾಂತ್ಯ ಕಂಡಿದ್ದರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ, "30 ದಿನಗಳ ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಹೇಗೆ ಕೊನೆಗೊಂಡಿದೆ ಎಂಬುದಕ್ಕೆ ಇಡೀ ದೇಶ ಸಾಕ್ಷಿಯಾಗಿದೆ. ಇದು ನಿಜಕ್ಕೂ 8 ಕೋಟಿ ರಾಜಸ್ಥಾನಿಗಳ ವಿಜಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.