ಕರ್ನಾಟಕ

karnataka

ETV Bharat / bharat

ಆರ್ಥಿಕ ಪರಿಸ್ಥಿತಿ ಪಕ್ಕಕ್ಕಿಟ್ಟು ನೋಡಿದರೆ, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ..! - The corona epidemic

20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಅಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ಮಾಡಿದ ಘೋಷಣೆಗಳ ಮೊದಲ ಮೂರು ಹಂತದಲ್ಲಿ ಹಲವು ಲಾಭಗಳನ್ನು ಪ್ರಕಟಿಸಲಾಗಿದೆ. ಮೌಲ್ಯದ ಆಧಾರದಲ್ಲಿ, ಒಟ್ಟು ಅನುಕೂಲಗಳು ಜಿಡಿಪಿಯ ಶೇ. 2 ಕ್ಕಿಂತ ಹೆಚ್ಚು ಇದೆ.

Concerns on finances apart, right move at right time
20 ಲಕ್ಷ ಕೋಟಿ ರೂ. ಪ್ಯಾಕೇಜ್

By

Published : May 20, 2020, 6:35 PM IST

ಹೈದರಾಬಾದ್​: ಅಮೆರಿಕದಂತಹ ದೊಡ್ಡ ದೇಶಗಳನ್ನು ಹೋಲಿಕೆ ಮಾಡಿಕೊಂಡು ನಾವು ಅತಿದೊಡ್ಡ ನಿರೀಕ್ಷೆಯನ್ನು ಹೊಂದಿದ್ದೆವು. ಆದರೆ, ಅಲ್ಪಕಾಲೀನ ಅಗತ್ಯವನ್ನು ಪೂರೈಸುವುದಕ್ಕೆ ಸಾಕಷ್ಟು ಲಿಕ್ವಿಡಿಟಿ ಇದೆ ಎಂದು ಭಾರತ ಸರ್ಕಾರ ಹೇಳಿಕೊಂಡಿದೆ. ಇದೇ ವೇಳೆ, ದೀರ್ಘಕಾಲದಿಂದಲೂ ಆಗದೇ ಉಳಿದುಕೊಂಡು, ಅಭಿವೃದ್ಧಿಗೆ ಅಡ್ಡಿಯಾಗಿದ್ದ ಸುಧಾರಣೆಗಳನ್ನು ಕೋವಿಡ್ ಸನ್ನಿವೇಶವನ್ನು ಬಳಸಿಕೊಂಡು ಸರ್ಕಾರ ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ.

ಭಾರತವನ್ನು ಒಂದು ಆಕರ್ಷಕ ಜಾಗತಿಕ ಹೂಡಿಕೆದಾರ ಸಮುದಾಯವ್ನಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಪರಿವರ್ತಿಸುವ ಉದ್ದೇಶವೇ ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಚೀನಾ ಸದ್ಯ ಗಮನ ಹರಿಸಿರುವ ವಲಯಕ್ಕೆ ಹೆಚ್ಚು ಗಮನವನ್ನು ಕೇಂದ್ರ ಸರ್ಕಾರ ವಹಿಸಿದ್ದು, ಚೀನಾದಿಂದ ಹೊರಹೋಗಲು ಬಯಸಿದ ಉದ್ಯಮಗಳಿಗೆ ಅವಕಾಶ ಕಲ್ಪಿಸಿದ ಅದರಿಂದ ಲಾಭ ಪಡೆಯುವ ಉದ್ದೇಶವೂ ಇದರಲ್ಲಿದೆ.

ನಗದು, ನರೇಗಾ ಕೆಲಸ ಮತ್ತು ಉಚಿತ ಧಾನ್ಯ, ಅಡುಗೆ ಅನಿಲ ಇತ್ಯಾದಿ ಸೌಲಭ್ಯಗಳನ್ನು ಬಡವರಿಗೆ ಒದಗಿಸಿದ್ದು, ಸ್ವಲ್ಪ ಸಮಯದವರೆಗೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಹಾಯ ಮಾಡಿದೆ. ಈ ಪೈಕಿ ಬಹುತೇಕ ಕ್ರಮಗಳನ್ನು ಪಿಎಂ ಗರೀಬ್‌ ಕಲ್ಯಾಣ್ ಅಡಿಯಲ್ಲಿ ಘೋಷಣೆ ಮಾಡಲಾಗಿದೆ.

20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಅಡಿಯಲ್ಲಿ ಹಣಕಾಸು ಸಚವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ಮಾಡಿದ ಘೋಷಣೆಗಳ ಮೊದಲ ಮೂರು ಹಂತದಲ್ಲಿ ಹಲವು ಲಾಭಗಳನ್ನು ಪ್ರಕಟಿಸಲಾಗಿದೆ. ಮೌಲ್ಯದ ಆಧಾರದಲ್ಲಿ, ಒಟ್ಟು ಅನುಕೂಲಗಳು ಜಿಡಿಪಿಯ ಶೇ. 2 ಕ್ಕಿಂತ ಹೆಚ್ಚು ಇದೆ.

ಉಳಿದ ಬಹುತೇಕ ನಿರೀಕ್ಷೆಗಳು ಹಣಕಾಸು ನೀತಿಯನ್ನು ಒಳಗೊಂಡಿವೆ. ಅಂದರೆ, ಆರ್ಥಿಕತೆಯ ಸಂಕೀರ್ಣ ವಲಯಗಳಿಗೆ ಹಣಕಾಸು ಸೌಲಭ್ಯವನ್ನು ಒದಗಿಸುವ ಘೋಷಣೆಗಳು ಇದರಲ್ಲಿ ಸೇರಿವೆ. ಈ ಪ್ಯಾಕೇಜ್‌ನ ಬಹುತೇಕ ಅನುಕೂಲಗಳು ಖಾಸಗಿ ವಲಯದ ಉದ್ಯಮಗಳು ಬೆಲೆಯಲು ಅಗತ್ಯವಾದ ವಾತಾವರಣ ನಿರ್ಮಾಣದ ಮೇಲೆ ಕೇಂದ್ರೀಕರಿಸಿದೆ ಮತ್ತು ದಕ್ಷವಲ್ಲದ ಅಥವಾ ಪ್ರಮುಖವದಲ್ಲ ಸರ್ಕಾರಿ ವಲಯದ ಮೌಲ್ಯವನ್ನು ಬಳಸಿಕೊಳ್ಳುವುದರ ಮೇಲೆ ಗಮನ ಹರಿಸಿದೆ.

ಆದಾಯದ ಮೂಲದಲ್ಲಿ ಸ್ಪಷ್ಟತೆ ಇಲ್ಲ

ಕೋವಿಡ್ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸುವಲ್ಲಿ ಭಾರತ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದೆ. ಪಿಎಂ ಗರೀಬ್‌ ಕಲ್ಯಾಣ್ ಯೋಜನೆ ಅಡಿಯಲ್ಲಿ 1.7 ಲಕ್ಷ ಕೋಟಿ ರೂ. ನೇರ ನಗದು ವರ್ಗಾವಣೆಯನ್ನು ಅತ್ಯಂತ ವೇಗವಾಗಿ ಮಾಡಲಾಗಿತ್ತು.

ನಗದು ವರ್ಗಾವಣೆ ಅಷ್ಟು ಸುಲಭದ ಸಂಗತಿಯಲ್ಲ. ಅಮೆರಿಕದಲ್ಲಿ ಕೋವಿಡ್ ಪರಿಹಾರಕ್ಕೆ ನೋಂದಣಿ ಮಾಡಿಕೊಳ್ಳುವಂತೆ ಕೇಳಲಾಗಿತ್ತು. ಬಹುತೇಕ ರಾಜ್ಯಗಳಲ್ಲಿ ಈ ವ್ಯವಸ್ಥೆ ವಿಫಲವಾಗಿದೆ. ಇದಕ್ಕೆ ಹೋಲಿಸಿದರೆ ಭಾರತದ ವ್ಯವಸ್ಥೆ ಅತ್ಯಂತ ಸರಾಗವಾಗಿತ್ತು. ಇದಕ್ಕೆ ಮೋದಿ ಸರ್ಕಾರದ ಮೊದಲ ಅವದಿಯಲ್ಲಿ ಕೈಗೊಂಡ ಕ್ರಮವೇ (ಜನ್‌ಧನ್‌, ಆಧಾರ್‌ ಸಂಪರ್ಕ ಇತ್ಯಾದಿ ಕ್ರಮಗಳು) ನೆರವಾಗಿತ್ತು.

ಜಿಡಿಪಿಗೆ ಡೆಟ್‌ ಅನುಪಾತ ಶೇ. 70 ರಷ್ಟಿದೆ ಮತ್ತು 6.5 ಶೇಕಡಾ ಕ್ರೋಢೀಕೃತ ವಿತ್ತ ಕೊರತೆ (ರಾಜ್ಯಗಳೂ ಒಳಗೊಂಡು) ಇದೆ. ಜನರಿಗೆ ನಗದು ನೀಡುವ ವಿಚಾರದಲ್ಲಿ ಅಮೆರಿಕ ಅಥವಾ ಜಪಾನ್‌ನಂತಹ ಶ್ರೀಮಂತ ದೇಶಗಳು ಹಾಕಿಕೊಟ್ಟ ಮಾದರಿಯನ್ನು ಭಾರತ ಅನುಸರಿಸಿಲ್ಲ.

ಆದರೆ, ಸರ್ಕಾರ ಈ ಹೆಚ್ಚುವರಿ ಹಣದ ಅಗತ್ಯವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಸ್ಪಷ್ಟವಿಲ್ಲ. 4.28 ಕೋಟಿ ರೂ. ಸಾಲ ಪಡೆಯಲು ಸುಧಾರಣಾ ಕ್ರಮಗಳನ್ನು ರಾಜ್ಯಗಳು ಪಡೆದಿರುವುದನ್ನು ಗಮನಿಸಿದರೆ, ಹೆಚ್ಚುವರಿ ಹಣಕಾಸನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ತುಂಬಾ ಕಡಿಮೆ ಅವಕಾಶಗಳು ಇವೆ. ಸರ್ಕಾರಗಳು ಹಣವನ್ನು ಮುದ್ರಿಸಿ, ಅದರಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳನ್ನೂ ಎದುರಿಸುತ್ತವೆಯೇ? ಐದು ದಿನಗಳವರೆಗೆ ನಡೆಸಿದ ಪ್ರೆಸೆಂಟೇಶನ್‌ನಲ್ಲೂ ಆದಾಯದ ಮೂಲದ ಬಗ್ಗೆ ಹಣಕಾಸು ಸಚಿವೆ ಯಾವುದೇ ಸ್ಪಷ್ಟತೆ ನೀಡಿಲ್ಲ.

ಸರ್ಕಾರ ಬಹುತೇಕವಾಗಿ ಬಂಡವಾಳ ಹಿಂತೆಗೆತವನ್ನು ಕೊನೆಯ ಅವಕಾಶವನ್ನಾಗಿ ಬಳಸಿಕೊಳ್ಳಬಹುದು. ಈ ಕುರಿತು ಯಾವ ಸ್ಪಷ್ಟತೆಯನ್ನೂ ನೀಡಿಲ್ಲ. ಸರ್ಕಾರದ ಒಟ್ಟಾರೆ ಆದಾಯ ಸಂಗ್ರಹ ಅತಂತ್ರವಾಗಿದೆ. ಎಷ್ಟು ಆದಾಯ ಸಂಗ್ರಹವಾಗುತ್ತದೆ ಮತ್ತು ಎಷ್ಟು ಅಂದಾಜು ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.

ಈ ವಿತ್ತಿಯ ಅಸ್ಥಿರತೆಯಿಂದಾಗಿಯೇ ಹೆದ್ದಾರಿ ಯೋಜನೆಯ ವಿಚಾರದಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಮಾಡಿಲ್ಲ. ಹೆದ್ದಾರಿ ನಿರ್ಮಾಣ ಯೋಜನೆಯು ಪ್ರಮುಖವಾಗಿ ಉದ್ಯೋಗ ಸೃಷ್ಟಿಸುತ್ತದೆ ಮತ್ತು ಇದರಿಂದಾಗಿಯೇ ಜಿಡಿಪಿ ದ್ವಿಗುಣಗೊಳ್ಳುವುದರಿಂದ ಈ ಯೋಜನೆ ಬಗ್ಗೆ ಯಾವುದೇ ನಿರ್ಧಾರ ವ್ಯಕ್ತಪಡಿಸದೇ ಇರುವುದು ಅಚ್ಚರಿ ಮೂಡಿಸಿದೆ.

ಆದರೆ, ಈಗಾಗಲೇ ಭಾರತ ಸರ್ಕಾರ ಭಾರತ್‌ಮಾಲಾ ಯೋಜನೆ ಅಡಿ ಹಲವು ಕಾಮಗಾರಿಗಳನ್ನು ಘೋಷಿಸಿದೆ. ಹೀಗಾಗಿ, ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸದೇ ಇರುವ ಸಾಧ್ಯತೆ ಇದೆ.

ಮಹತ್ವದ ಹೆಜ್ಜೆ!

ಘಟನೆಗಳ ಸರಣಿಯನ್ನು ಗಮನಿಸಿದರೆ ಸರ್ಕಾರ ದೊಡ್ಡ ರಿಸ್ಕ್‌ ತೆಗೆದುಕೊಂಡಿದೆ ಎನ್ನಬಹುದು. ಅಷ್ಟಕ್ಕೂ, ಈ ರಿಸ್ಕ್‌ ತೆಗೆದುಕೊಳ್ಳುವುದರಿಂದ ಲಾಭವೂ ಇದೆ. ಕೋವಿಡ್ ನಂತರದ ಸನ್ನಿವೇಶದಲ್ಲಿ ವಿಶ್ವ ಅತ್ಯಂತ ತ್ವರಿತವಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ. ಒಂದು ಸಾಮಾನ್ಯ ಸನ್ನಿವೇಶದಲ್ಲಿ ಒಂದು ಘಟಕವನ್ನು ಬದಲಿಸುವ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಲಾಗುತ್ತದೆ, ಅಧ್ಯಯನ ನಡೆಸಲಾಗುತ್ತದೆ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಹಲವು ಹಂತದಲ್ಲಿ ಚರ್ಚೆ ನಡೆಯುತ್ತದೆ. ವ್ಯಾಪಾರ ವಲಯದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತದೆ.

ಆದರೆ ಕೋವಿಡ್ ಟೆಸ್ಟ್‌ ಕಿಟ್‌ಗಳ ಉತ್ಪಾದನೆಯಲ್ಲಿ ದಕ್ಷಿಣ ಕೊರಿಯಾ ಹೂಡಿಕೆ ಮಾಡಲು ನಿರ್ಧಾರ ಮಾಡುವಾಗ ಮತ್ತು ಚೀನಾದಿಂದ ಉತ್ತರ ಪ್ರದೇಶಕ್ಕೆ ಜರ್ಮನ್‌ ಫುಟ್‌ವೇರ್‌ ಬ್ರಾಂಡ್‌ ವಾನ್‌ ವೆಲ್‌ಕ್ಸ್‌ ಬದಲಿಸಲು ನಿರ್ಧಾರ ಮಾಡಿದಾಗ ಈ ಯಾವ ಚರ್ಚೆಯೂ ನಡೆದಂತೆ ಕಂಡುಬರಲಿಲ್ಲ. ಕೋವಿಡ್‌ ನಂತರದಲ್ಲಿ ವಿಶ್ವ ಅತಿ ಹೆಚ್ಚು ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡುವ ಬಗ್ಗೆ ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್ ನಿರ್ಧಾರ ಮಾಡಿರುವ ವಿಚಾರದಲ್ಲೂ ಇದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಆಕ್ಸ್‌ಫೋರ್ಡ್‌ ಯೂನಿವರ್ಸಿಟಿಯು ಪ್ರಯೋಗಗಳನ್ನು ಆರಂಭಿಸುವುದಕ್ಕೂ ಮೊದಲೇ ಸೀರಮ್ ಇನ್‌ಸ್ಟಿಟ್ಯೂಟ್ ಈ ನಿರ್ಧಾರ ಮಾಡಿತ್ತು.

ಈ ಸನ್ನಿವೇಶದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲು ಮತ್ತು ಎಲ್ಲವನ್ನೂ ಸುಸ್ಥಿತಿಗೆ ತರುವ ನಿರ್ಧಾರ ಕೈಗೊಳ್ಳಲು ಭಾರತಕ್ಕೆ ಅತ್ಯಂತ ಕಡಿಮೆ ಅವಧಿ ಇತ್ತು. ಒಂದು ವೇಳೆ ತುರ್ತು ನಿರ್ಧಾರ ಕೈಗೊಳ್ಳದೇ ಇದ್ದರೆ ನಾವು ಅವಕಾಶವನ್ನು ಕೈಚೆಲ್ಲಿಕೊಳ್ಳುತ್ತಿದ್ದೆವು. ಆದರೆ, ಭಾರತ ಅವಕಾಶವನ್ನು ಬಳಸಿಕೊಂಡಿತು ಮತ್ತು ಸುಧಾರಣಾ ಕ್ರಮಗಳನ್ನು ಘೋಷಿಸುವುದಕ್ಕೆ ಮುಂದಿನ ಅಧಿವೇಶನ ಆರಂಭವಾಗುವವರೆಗೆ ಕಾದು ಕುಳಿತುಕೊಳ್ಳಲಿಲ್ಲ.

ಮಹತ್ವದ ಸುಧಾರಣೆಗಳು

ಘೋಷಿಸಿರುವ ಸುಧಾರಣಾ ಕ್ರಮಗಳು ಅತ್ಯಂತ ಮಹತ್ವದ್ದಾಗಿವೆ. ಫಾರ್ಮ್‌ಗೇಟ್‌ ಪ್ರೋಸೆಸಿಂಗ್ ಘಟಕಗಳಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದಾಗಿ ರೈತರಿಗೆ ತಮ್ಮ ಬೆಳೆ ಮಾರಾಟ ಮಾಡುವಲ್ಲಿ ಇನ್ನಷ್ಟು ಸ್ವಾತಂತ್ರ್ಯ ಸಿಕ್ಕಂತಾಗಿದೆ. ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರೆ, ಪ್ರಸ್ತುತ ವ್ಯಾಪಾರ ವ್ಯವಸ್ಥೆಯೇ ಬದಲಾವಣೆಯಾಗಲಿದೆ. ಸದ್ಯ ಶೇ. 40 ರಷ್ಟು ತೋಟಗಾರಿಕೆ ಬೆಳೆ ನಷ್ಟವಾಗುತ್ತಿದ್ದು, ಮಧ್ಯವರ್ತಿಗಳು ಶೇ. 70 ರಷ್ಟು ಮೌಲ್ಯವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ.

ಪ್ರಗತಿಪರ ತಮಿಳುನಾಡಿನಂತಹ ರಾಜ್ಯಗಳು ಈಗಾಗಲೇ ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಬದಲಿಸಿವೆ. ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲದಿಂದ ಹಲವು ರಾಜ್ಯಗಳು ಈ ನೀತಿಯನ್ನು ವಿರೋಧಿಸಿವೆ. ಪಶ್ಚಿಮ ಬಂಗಾಳದಂತಹ ಆರ್ಥಿಕವಾಗಿ ಬಲಹೀನವಾಗಿರುವ ರಾಜ್ಯಗಳು ಇಂತಹ ಸುಧಾರಣೆಗಳನ್ನು ವಿರೋಧಿಸುತ್ತಿವೆ. ಆದರೆ, ಈಗ ಸಾಲ ಮಿತಿಗೆ ಇದನ್ನು ತಳಕುಹಾಕಿರುವುದರಿಂದ ರಾಜ್ಯಗಳಿಗೆ ಆಯ್ಕೆ ಕಡಿಮೆ ಇವೆ. ಇಂತಹ ಸುಧಾರಣೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರೆ, ಹಲವು ಪ್ರಾಂತೀಯ ತಾರತಮ್ಯವನ್ನು ನಿವಾರಿಸಲು ಸಹಕಾರಿಯಾಗಲಿದೆ ಮತ್ತು ಮಾರುಕಟ್ಟೆಯಾಗಿ ಮತ್ತು ಹೂಡಿಕೆಯ ತಾಣವಾಗಿ ಭಾರತ ಬೆಳೆಯುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ABOUT THE AUTHOR

...view details