ಇಂದೋರ್: ಮಧ್ಯಪ್ರದೇಶದ ಇಂದೋರ್ ಜೈಲಿನಲ್ಲಿ 10 ದಿನಗಳ ಕಾಲ ಕಂಬಿ ಎಣಿಸಿದ ನಂತರ ಗುರುವಾರ ರಾತ್ರಿ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ ಬಿಡುಗಡೆಯಾಗಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಇದು ಸತ್ಯದ ವಿಜಯ' ಎಂದು ಮಾತ್ರ ಹೇಳಿ ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿ ತೆರಳಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ 'ಕಂಪ್ಯೂಟರ್ ಬಾಬಾ' ಇಂದೋರ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಆಶ್ರಮದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನೆಲಸಮ ಮಾಡಿ ಬಾಬಾನನ್ನು ಬಂಧಿಸಿದ್ರು.