ಕರ್ನಾಟಕ

karnataka

ETV Bharat / bharat

ಮಗುವಿಗೆ ತಿನ್ನುವ ಅನುಭವವನ್ನು ಆಹ್ಲಾದಕರವಾಗಿರಿಸಲು ಪೂರಕ ಆಹಾರ ಯಾವುದು ಗೊತ್ತಾ? - better food for infant

ಟಿವಿ ಅಥವಾ ಮೊಬೈಲ್​​ ಮುಂದೆ ತಿನ್ನಿಸಬಾರದು. ಮಗುವಿನ ಜೊತೆ ಐ ಕಾಂಟ್ಯಾಕ್ಟ್​ ತುಂಬ ಮುಖ್ಯ. ಮಗುವಿನ ಜೊತೆ ಮಾತನಾಡುತ್ತಾ, ಮುದ್ದಿಸುತ್ತಾ ತಿನ್ನಿಸಬೇಕು. ಮಗುವಿಗೂ ಹಿರಿಯರಿಗೆ ನೀಡುವಂತೆಯೇ ಪ್ಲೇಟ್​ ಅಥವಾ ತಟ್ಟೆಯಲ್ಲಿ ಊಟ ಹಾಕಿಕೊಂಡು ತಿನ್ನಿಸಬೇಕು..

pleasurable experience
ಮಗುವಿನ ಪೋಷಣೆ

By

Published : Sep 5, 2020, 10:28 PM IST

ವಾಂತಿ ಕಾರಣದಿಂದಾಗಿ 7 ತಿಂಗಳ ಮಗುವೊಂದನ್ನು ಕ್ಲಿನಿಕ್​​ಗೆ ಕರೆತರಲಾಯ್ತು. ಆ ಮಗುವಿಗೆ ಅತಿಸಾರ ಭೇದಿ ಮತ್ತು ಹೊಟ್ಟೆನೋವು ಇತ್ತು. ಇದಕ್ಕೆ ಕಾರಣ ಏನಿರಬಹುದು? ಮಗುವಿನ ತಾಯಿ ಬಳಿ ವಿಚಾರಿಸಿದಾಗ ಅವರು ಹೇಳಿದ್ದು ಮಗುವಿಗೆ ಗಂಜಿ ಮತ್ತು ದಾಲ್ ನೀರನ್ನು ಜೊತೆಗೆ ಉತ್ತಮ ಗುಣಮಟ್ಟದ ಹಾಲನ್ನು ಬಾಟಲ್ ಮೂಲಕ ಕುಡಿಸಲಾಗುತ್ತಿತ್ತು.

ಇದರಿಂದ ತಿಳಿಯುವುದೇನೆಂದರೆ ಮಗುವಿನ ಹಸಿವನ್ನು ನೀಗಿಸಲು ಈ ರೀತಿಯ ಆಹಾರಕ್ರಮವು ಸಾಕಾಗುವುದಿಲ್ಲ. ಜೊತೆಗೆ ತಾಯಿಯ ಎದೆಹಾಲಿಗಿಂತ ಹೆಚ್ಚಿನದನ್ನು ಮಗುವಿಗೆ ಆಹಾರವನ್ನು ನೀಡುವ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಈ ಕುರಿತು ತಾಯಂದಿರಿಗೆ ಹೆಚ್ಚಿನ ಅರಿವು ಇಲ್ಲದ ಕಾರಣ ತಾಯಂದಿರು ಮಗುವಿಗೆ ಒಳ್ಳೆಯ ಆಹಾರಕ್ಕಿಂತ, ಮಗುವಿನ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರದ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಮಗುವಿನ ಪೋಷಣೆ

ಮಗುವಿನ ಪೂರಕ ಆಹಾರದ ಬಗ್ಗೆ WHO ( WORLD HEALTH ORGANIZATION) ಮಾರ್ಗಸೂಚಿಗಳು.

6 ರಿಂದ 9 ತಿಂಗಳವರೆಗಿನ ಮಕ್ಕಳಿಗೆ :ತಾಯಿಯ ಎದೆಹಾಲಿನ ಜೊತೆಗೆ ಮನೆಯಲ್ಲೇ ತಯಾರಿಸಿದ ತುಂಬಾ ಗಟ್ಟಿಯಲ್ಲದ ಬೇಕಾದರೆ ಸ್ವಲ್ಪ ಘನ ಆಹಾರವನ್ನ ತಿನ್ನಿಸಬೇಕು. ದಿನ 2 ರಿಂ3 ಬಾರಿ ಈ ರೀತಿಯ ಆಹಾರ ಹಾಗೂ ಮಗುವಿಗೆ ಬೇಕು ಅನಿಸಿದರೆ ಒಂದು ಸಲ ಅಥವಾ 2 ಬಾರಿ ತಿಂಡಿ ನೀಡಬಹುದು.

9 ರಿಂದ 12 ತಿಂಗಳ ಮಕ್ಕಳಿಗೆ :ಈ ವಯಸ್ಸಿನ ಮಕ್ಕಳಿಗೆ ಕ್ರಮೇಣ ಊಟದ ಪ್ರಮಾಣ ಹೆಚ್ಚಿಸಬೇಕು. 3 ರಿಂದ 4 ಬಾರಿ ಹಾಗೇ ಒಂದೆರಡು ಬಾರಿ ಹೆಚ್ಚಿಗೆ ನೀಡುವುದು ಒಳ್ಳೆಯದು.

12 ತಿಂಗಳ ಮೇಲ್ಪಟ್ಟ ಮಕ್ಕಳಿಗೆ :3 ರಿಂದ 4 ಸಲ ಊಟ ಜೊತೆಗೆ 2 ಸಲ ಹೆಚ್ಚುವರಿ ತಿಂಡಿಗಳನ್ನು ನೀಡಿ. ಈ ವಯಸ್ಸಿನ ಮಕ್ಕಳಿಗೆ ಊಟದ ಪ್ರಮಾಣವನ್ನು ಹೆಚ್ಚಿಸಿ. ಕಡಿಮೆ ಅಂದರೆ 2 ವರ್ಷದವರೆಗೆ ಆದರೂ ಮಕ್ಕಳಿಗೆ ಎದೆಹಾಲು ಉಣಿಸುವುದು ಕಡ್ಡಾಯ. ಆದಾದ ನಂತರ ಎದೆಹಾಲು ಕುಡಿಸುವುದು ತಾಯಿಯ ನಿರ್ಧಾರಕ್ಕೆ ಬಿಟ್ಟಿದ್ದು. ಬೇಕೆಂದರೆ ಮಗುವಿಗೆ 7 ವರ್ಷ ತುಂಬುವವರೆಗೂ ಕುಡಿಸಬಹುದು.

ವಯಸ್ಸಿಗೆ ಅನುಗುಣವಾಗಿ ಎದೆ ಹಾಲು ಮತ್ತು ಪೂರಕ ಬದಲಾವಣೆಯ ಅಗತ್ಯವಿದೆಯೇ?

ಹೌದು.. ಈ ಕೆಳಗಿನ ಕೋಷ್ಟಕವು ತಿಳುವಳಿಕೆಯನ್ನು ಸರಳಗೊಳಿಸುತ್ತದೆ.

ಎದೆ ಹಾಲು ಮತ್ತು ಪೂರಕ ಆಹಾರಗಳಿಂದ ಪೋಷಣೆ

6-9 ತಿಂಗಳು 70 %, 30 %

9-12 ತಿಂಗಳು 50 % , 50%

13-24 ತಿಂಗಳು 30 % ಇದು ನರಗಳ ಅಭಿವೃದ್ಧಿಗೆ 70% ಪ್ರಮುಖವಾದ ಕೊಬ್ಬುಗಳನ್ನು ಹೊಂದಿರುತ್ತದೆ.

6 ತಿಂಗಳವರೆಗೆ ಮಾತ್ರ ಎದೆಹಾಲು ಉಣಿಸುವುದು ಏಕೆ?

ಎದೆಹಾಲಿನಲ್ಲಿ ಗರಿಷ್ಠ ಪೋಷಕಾಂಶವಿರುತ್ತದೆ. ಇದು ಕಬ್ಬಿಣ,ಫೋಲಿಕ್​ ಆಮ್ಲವನ್ನು ಹೊರತುಪಡಿಸಿ ಸಾಕಷ್ಟು ಪ್ರೊಟೆಕ್ಟೀವ್​​​ ವಸ್ತುಗಳನ್ನು ಒಳಗೊಂಡಿದೆ. ಇದು ಮಗುವು ವೇಗವಾಗಿ ಬೆಳವಣಿಗೆ ಸಾಧಿಸಲು ಸಹಾಯ ಮಾಡುತ್ತದೆ.

ಪೂರಕ ಆಹಾರವನ್ನು ಹೇಗೆ ಪರಿಚಯಿಸುವುದು?

ಅದಕ್ಕೆಂದೇ ಅತ್ಯುತ್ತಮ ನಿಯಮಗಳು ಹೀಗಿವೆ.

1. ಕಡಿಮೆ ಪ್ರಮಾಣ, ನಿಯಂತ್ರಿಸುವ ಉತ್ಸಾಹ, ಮಗುವಿಗೆ ಅತಿಯಾದ ಆಹಾರವನ್ನು ನೀಡುವುದನ್ನು ತಡೆಯಿರಿ.

2 ಒಂದು ಸಮಯದಲ್ಲಿ ಒಂದು ಆಹಾರ ಕೊಟ್ಟು ನೋಡುವುದು - ಆಹಾರದ ಅಲರ್ಜಿಯನ್ನು ಗುರುತಿಸಲು ಸಹಾಯ ಮಾಡುತ್ತದೆ.

3. ಮಗುವಿಗೆ ಯಾವುದೇ ಸೋಂಕು ಹರಡದಂತೆ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವುದು.

ಪೂರಕ ಆಹಾರದ ಸ್ಥಳ :ತಿನ್ನುವಾಗ ಮಗುವನ್ನು 45 ಡಿಗ್ರಿಗಳಷ್ಟು ಒರಗಿ ಕೂರಿಸಬೇಕು ಅಥವಾ ತಾಯಿಯ ಎದುರು ಕುಳಿತುಕೊಳ್ಳಬೇಕು. ಅಥವಾ ಕುಟುಂಬದ ಇತರ ಸದಸ್ಯರೊಂದಿಗೆ ಟೇಬಲ್​ ಬಳಿ ಆಹಾರ ನೀಡಿ.

ಮಗುವಿಗೆ ಆಹಾರ ತಿನಿಸುವಾಗ ಈ ಕೆಳಗಿನವುಗಳನ್ನು ಮಾಡಬಾರದು :ಟಿವಿ ಅಥವಾ ಮೊಬೈಲ್​​ ಮುಂದೆ ತಿನ್ನಿಸಬಾರದು. ಮಗುವಿನ ಜೊತೆ ಐ ಕಾಂಟ್ಯಾಕ್ಟ್​ ತುಂಬ ಮುಖ್ಯ. ಮಗುವಿನ ಜೊತೆ ಮಾತನಾಡುತ್ತಾ, ಮುದ್ದಿಸುತ್ತಾ ತಿನ್ನಿಸಬೇಕು. ಮಗುವಿಗೂ ಹಿರಿಯರಿಗೆ ನೀಡುವಂತೆಯೇ ಪ್ಲೇಟ್​ ಅಥವಾ ತಟ್ಟೆಯಲ್ಲಿ ಊಟ ಹಾಕಿಕೊಂಡು ತಿನ್ನಿಸಬೇಕು. ಸಕ್ಕರೆ ಪದಾರ್ಥ,ಬಿಸ್ಕತ್​​ ಹಾಗೂ ರೆಡಿಮೇಡ್​​ ಫುಡ್​ಗಳನ್ನು ಮಕ್ಕಳಿಗೆ ಕೊಡುವುದನ್ನು ಆದಷ್ಟು ಕಡಿಮೆ ಮಾಡಬೇಕು.

ಚಮಚದ ಬದಲು ಮಗುವಿಗೆ ಕೈಯಲ್ಲೇ ಕಲಸಿ ತಿನ್ನಿಸಬೇಕು. ಹಾಗೇ ಮುಗುವಿಗೆ ಒಂದೇ ಆಹಾರವನ್ನು ತಿನ್ನಿಸಿ ಬೋರ್​ ಆಗುವಂತೆ ಮಾಡುವ ಬದಲು ಬೇರೆ-ಬೇರೆ ಪೂರಕ ರುಚಿಭರಿತ ಆಹಾರ ನೀಡಿ. ಆದರೆ, ಆರ್ಟಿಫಿಷಿಯಲ್​​ ಫ್ಲೇವರ್​​ ಇರುವ ಆಹಾರ ಕೊಡಬೇಡಿ. ಮಗುವಿಗೆ ಬೆಲ್ಲವನ್ನು ತಿನ್ನಿಸಿ ಇದು ಒಳ್ಳೆಯದು. ಜೊತೆಗೆ ಇಡ್ಲಿ, ಕಟ್ಲೇಟ್​, ಲಾಡು, ಪೋಹ ಪರಾಠ ತಿನ್ನಿಸಿ. ಆದರೆ, ಉಪ್ಪುಭರಿತ ಚಿಪ್ಸ್​ ಅಥವಾ ಸಾಸ್​​ ಕೊಡಬೇಡಿ.

WHO ಏಳು ಆಹಾರದ ಗುಂಪುಗಳು ಜೊತೆಗೆ ಸೂರ್ಯನ ತಿಳಿಶಾಖ ಇವುಗಳು ಮಗುವಿಗೆ ಅವಶ್ಯಕ ಎಂದು ಹೇಳುತ್ತದೆ. ಜೊತೆಗೆ ಕೆಳಗೆ ನೀಡಿರುವ ಆಹಾರಗಳಲ್ಲಿ 4 ಅಂಶಗಳಂತೂ ಅತೀ ಅವಶ್ಯಕ.

1. ಸಿರಿಧಾನ್ಯಗಳು 2.ಬೇಳೆಕಾಳುಗಳು,3.ವಿಟಮಿನ್​ ಎ 4.ಸಸ್ಯಾಹಾರಿ ಪದಾರ್ಥ ಮತ್ತು ಹಣ್ಣುಗಳು5.ಹಾಲು ಮತ್ತು ಹಾಲಿನ ಉತ್ಪನ್ನಗಳು.6.ಮೊಟ್ಟೆ, ಮಾಂಸ ಮತ್ತು ಕೋಳಿ ಹಾಗೂ7. ವಿಟಮಿನ್​ ಸಿ, ವಿಟಮಿನ್​ ಬಿ ಮತ್ತು ಐರನ್​

ಆಯಾ ಸೀಸನ್​​ನಲ್ಲಿ ದೊರೆಯುವ ಹಣ್ಣುಗಳನ್ನು ತಿನ್ನಲು ಮಗುವನ್ನು ಪ್ರೋತ್ಸಾಹಿಸಿ. ಕಿವುಚಿದ ಪಪ್ಪಾಯಿ, ಬಾಳೆಹಣ್ಣು, ಕೇಸರಿಬಾತ್, ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲ್ಪಟ್ಟ ಉತ್ಪನ್ನ, ಗೋಧಿ ನುಚ್ಚಿನಿಂದ ತಯಾರಿಸಿದ ಖಿಚ್ಡಿ ಇತ್ಯಾದಿ.

ಮಕ್ಕಳಿಗೆ ಏನನ್ನೂ ನೀಡಬಾರದು : ಗಂಜಿ, ಹಣ್ಣಿನ ಜ್ಯೂಸ್​​, ಬೇಕರಿ ತಿಂಡಿ, ಜಂಕ್‌ಫುಡ್​​, ಶುಗರ್​​ ಕ್ಯಾಂಡಿಸ್​​, ಆ್ಯಡೆಡ್​​ ಫ್ಲೇವರ್ಸ್​​​​​

ಈ ಮೇಲಿನ ವಿವರಗಳನ್ನು ಡಾ. ಶಮಾ ಜಗದೀಶ್​ ಕುಲಕರ್ಣಿ, M.B.B.S, D.C.H, I.B.C.L.C, Developmental , Adolescent’s and Lactation Pediatrician, at Jagadisha Child Guidance and Lactation Management Clinic, Nasik, Maharashtra. ಇವರಿಂದ ಪಡೆದುಕೊಳ್ಳಲಾಗಿದೆ.

ಮಗುವಿನ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಮಗುವಿನ ಆಹಾರದಲ್ಲಿ ಪರಿಚಯಿಸಲಾದ ಆಹಾರ ಪದ್ಧತಿ ಇದಾಗಿದೆ.

ABOUT THE AUTHOR

...view details