ಕರ್ನಾಟಕ

karnataka

ETV Bharat / bharat

'ಮಹಾ' ನಾಟಕದ ನಡುವೆ ಎನ್‌ಸಿಪಿ ಶಾಸಕ ಕಾಣೆ: ದೂರು ದಾಖಲು - maharastra high drama

ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅತ್ತ ಶಹಾಪುರ ಕ್ಷೇತ್ರದ ಎನ್‌ಸಿಪಿ ಶಾಸಕ ದೌಲತ್ ದರೋಡಾ ಕಾಣೆಯಾಗಿದ್ದು, ದೂರು ದಾಖಲಾಗಿದೆ.

ಎನ್‌ಸಿಪಿ ಶಾಸಕ ಕಾಣೆ

By

Published : Nov 24, 2019, 8:38 AM IST

ಮಹಾರಾಷ್ಟ್ರ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದ ಕೆಲವೇ ಗಂಟೆಗಳ ನಂತರ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕರೊಬ್ಬರು ಕಾಣೆಯಾಗಿದ್ದಾರೆಂದು ಥಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರದಂದು ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್, ಕ್ರಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅತ್ತ ಶಹಾಪುರ ಕ್ಷೇತ್ರದ ಎನ್‌ಸಿಪಿ ಶಾಸಕ ದೌಲತ್ ದರೋಡಾ ನಿನ್ನೆ ಬೆಳಗ್ಗೆ ರಾಜಭವನಕ್ಕೆ ಭೇಟಿ ನೀಡಿದ ಬಳಿಕ ನಾಪತ್ತೆಯಾಗಿದ್ದಾರೆ. ಮಾಜಿ ಶಾಸಕ ಪಾಂಡುರಂಗ್ ಬರೋರಾ, ಶನಿವಾರ ಸಂಜೆ ಥಾಣೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.

ದೂರು ಪ್ರತಿ

ಇಂದು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ:

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ರಾಜ್ಯಪಾಲರ ಬಳಿ ತೆರಳುವಾಗ 114 ಶಾಸಕರ ಸಹಿಗಳಿರುವ ಪತ್ರ ತೆಗೆದುಕೊಂಡು ಹೋಗಬೇಕು. ಆದರೆ ಈ ಯಾವುದೇ ಪತ್ರವಿಲ್ಲದೇ ದೇವೇಂದ್ರ ಫಡ್ನವೀಸ್​​, ಪ್ರಮಾಣ ವಚನ ಸ್ವೀಕರಿಸಲು ಏಕಾಏಕಿ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇದೀಗ ಎನ್​ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆ 11:30ಕ್ಕೆ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

ABOUT THE AUTHOR

...view details