ಕರ್ನಾಟಕ

karnataka

ETV Bharat / bharat

ಸಿಎಎ ಕುರಿತು ಟ್ವೀಟ್: ನಟ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು - ಸಿಎಎ ಕುರಿತು ಟ್ವೀಟ್​ ಮಾಡಿದ ಫರ್ಹಾನ್ ಅಖ್ತರ್

ಸಿಎಎ ಬಗ್ಗೆ ವ್ಯಾಪಕವಾಗಿ ನಡೆಯುತ್ತಿರುವ ಹೋರಾಟದ ಬೆನ್ನಲ್ಲೇ ನಟ ಫರ್ಹಾನ್ ಅಖ್ತರ್ ಟ್ವೀಟ್​ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಸೈದಾಬಾದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು , Complaint filed against Farhan Akhtar over comments on CAA
ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು

By

Published : Dec 22, 2019, 9:58 AM IST

ಹೈದರಾಬಾದ್: ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ಟ್ವೀಟ್​ನಲ್ಲಿ ಆಕ್ರೋಶ ಹೊರಹಾಕಿದ್ದ ಬಾಲಿವುಡ್ ನಟ ಮತ್ತು ಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲಾಗಿದೆ.

ಹಿಂದೂ ಸಂಘತಾನ್ ಸಂಸ್ಥಾಪಕ ಕರುಣಾ ಸಾಗರ್ ಎಂಬುವರು ಸೈದಾಬಾದ್​ ಪೊಲೀಸ್​ ಠಾಣೆಯಲ್ಲಿ ಅಖ್ತರ್ ವಿರುದ್ಧ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ​ ಪ್ರತಿಭಟಿಸುವ ಕಾಲ ಮುಗಿಯಿತು ಎಂಬ ಟ್ವೀಟ್ ಅನ್ನು ಅವರು ಮಾಡಿದ್ದರು. ಇದಕ್ಕೆ ಪರ ವಿರೋಧದ ಕಾಮೆಂಟ್ಸ್​ಗಳು ಕೂಡ ವ್ಯಕ್ತವಾಗಿದ್ದವು.

ಕರುಣಾ ಸಾಗರ್ ದೂರು ನೀಡಿದ್ದಾರೆ. ಅಲ್ಲದೆ, ಫಾರುಖ್​ ಅವರ ಟ್ವೀಟ್​ ಪ್ರಚೋದನೆಯನ್ನು ನೀಡುವಂತಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details