ಕರ್ನಾಟಕ

karnataka

ETV Bharat / bharat

ಹೈದರಾಬಾದ್​ ಎನ್​​ಕೌಂಟರ್​​​​ ನಕಲಿ ಆರೋಪ: ಸೈಬರಾಬಾದ್​ ಪೊಲೀಸರ ವಿರುದ್ಧ ದೂರು ದಾಖಲು! - Cyberabad police encounter news

ಎನ್​ಕೌಂಟರ್​ ಮೂಲಕ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಹುಟ್ಟಡಗಿಸಿ ಎಲ್ಲರಿಂದ ಶ್ಲಾಘನೆಗೆ ಪಾತ್ರರಾಗಿದ್ದ ಸೈಬರಾಬಾದ್​ ಪೊಲೀಸರ ವಿರುದ್ಧ ಈಗ ದೂರು ದಾಖಲಾಗಿದೆ. ನಾಲ್ವರು ಅತ್ಯಾಚಾರ ಆರೋಪಿಗಳನ್ನು ನಕಲಿ ಎನ್​ಕೌಂಟರ್​ ಮೂಲಕ ಕೊಲ್ಲಲಾಗಿದೆ ಎಂದು ಆರೋಪಿಸಿ ಉಪ್ಪಲ್​ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಸೈಬರಾಬಾದ್​ ಪೊಲೀಸರ ವಿರುದ್ಧ ದೂರು ದಾಖಲು, Complaint filed against Cyberabad police over encounter
ಸೈಬರಾಬಾದ್​ ಪೊಲೀಸರ ವಿರುದ್ಧ ದೂರು ದಾಖಲು

By

Published : Dec 9, 2019, 7:53 AM IST

ಹೈದರಾಬಾದ್​: ಎನ್​ಕೌಂಟರ್​ ಮೂಲಕ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಹುಟ್ಟಡಗಿಸಿದ್ದ ಸೈಬರಾಬಾದ್​ ಪೊಲೀಸರ ವಿರುದ್ಧ ದೂರು ದಾಖಲಾಗಿದೆ.

ಉಪ್ಪಲ್​ ಪೊಲೀಸ್ ಠಾಣೆಯಲ್ಲಿ ನೇನು ಸೈತಮ್​ ಸಂಘಟನೆಯ ಅಧ್ಯಕ್ಷ ಡಿ.ಪ್ರವೀಣ್​ ಕುಮಾರ್​, ನಾಲ್ವರು ಅತ್ಯಾಚಾರ ಆರೋಪಿಗಳನ್ನು ನಕಲಿ ಎನ್​ಕೌಂಟರ್​ ಮೂಲಕ ಕೊಲ್ಲಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದಿದ್ದ ಮೊಹಮದ್​ ಆರಿಫ್​, ಚಿಂತಕುಂಟ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್​ ಎಂಬ ಆರೋಪಿಗಳನ್ನು ಸೈಬರಾಬಾದ್​ ಪೊಲೀಸರು ಎನ್​ಕೌಂಟರ್​ ಮಾಡಿದ್ದರು. ಇದು ನಕಲಿ ಎನ್​ಕೌಂಟರ್​(fake encounter) ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ದೂರುದಾರ ಪ್ರವೀಣ್ ಆಗ್ರಹಿಸಿದ್ದಾರೆ. ಆದರೆ ಸದ್ಯ ಈ ಪ್ರಕರಣ ಕುರಿತು ಎನ್​ಹೆಚ್​ಆರ್​ಸಿ ತನಿಖೆ ನಡೆಸುತ್ತಿರುವುದರಿಂದ ಈ ದೂರಿನ ಸಂಬಂಧ ಎಫ್​ಐಆರ್​ ದಾಖಲಿಸಿಲ್ಲ ಎಂದು ಉಪ್ಪಲ್​ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details