ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿತರಿಗೆ ಔಷಧ ನೀಡಲು ಬಂದ ಯಂತ್ರ ಮಾನವ! - corona virus

ತಿರುಚ್ಚಿಯ ಖಾಸಗಿ ಸಾಫ್ಟ್‌ವೇರ್ ಕಂಪನಿಯೊಂದು ನಗರದ ಸರ್ಕಾರಿ ಆಸ್ಪತ್ರೆಗೆ ರೊಬೋಟ್​​ಗಳನ್ನು ನೀಡಿದೆ. ಈ 4 ರೋಬೋಟ್‌ಗಳು ಪ್ರಸ್ತುತ ಬಳಕೆಗೆ ಸಿದ್ಧವಾಗಿವೆ.

ಕೊರೊನಾ ರೋಗಿಗಳಿಗೆ ಔಷದಿ ನೀಡಲು ಬಂದ ರೋಬೋಟ್​ಗಳು
ಕೊರೊನಾ ರೋಗಿಗಳಿಗೆ ಔಷದಿ ನೀಡಲು ಬಂದ ರೋಬೋಟ್​ಗಳು

By

Published : Mar 30, 2020, 9:50 AM IST

ತಮಿಳುನಾಡು: ಕೊರೊನಾ ಇಡೀ ಜಗತ್ತನ್ನು ಎಷ್ಟು ಬೆಚ್ಚಿ ಬೀಳಿಸಿದೆ ಎಂದು ಹೇಳಲು ಅಸಾಧ್ಯ. ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರೊಬೋಟ್​ ​ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಕೋವಿಡ್- 19 ನಿಂದ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಔಷಧಗಳನ್ನು ಈ ರೊಬೋಟ್​​ಗಳು ನೀಡಲಿವೆ.

ತಿರುಚ್ಚಿಯ ಖಾಸಗಿ ಸಾಫ್ಟ್‌ವೇರ್ ಕಂಪನಿಯೊಂದು ನಗರದ ಸರ್ಕಾರಿ ಆಸ್ಪತ್ರೆಗೆ ರೊಬೋಟ್​ಗಳನ್ನು ದೇಣಿಗೆ ರೂಪದಲ್ಲಿ ನೀಡಿದೆ. ಈ 4 ರೋಬೋಟ್‌ಗಳು ಪ್ರಸ್ತುತ ಬಳಕೆಗೆ ಸಿದ್ಧವಾಗಿವೆ.

ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿದರೆ ರೊಬೋಟ್​ಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಆಸ್ಪತ್ರೆಯ ಡೀನ್​ ತಿಳಿಸಿದ್ದಾರೆ.

ABOUT THE AUTHOR

...view details