ತೆಲಂಗಾಣ:ಪೂರ್ವ ಲಡಾಖ್ನಲ್ಲಿ ಚೀನಾ ಯೋಧರ ದಾಳಿಯಲ್ಲಿ ಹುತಾತ್ಮರಾಗಿದ್ದ ಕರ್ನಲ್ ಸಂತೋಷ್ ಬಾಬು ಅವರ ಪತ್ನಿಗೆ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಈ ಹಿಂದೆ 5 ಕೋಟಿ ರೂ. ಪರಿಹಾರ ನೀಡಿದ್ದರು. ಇದೀಗ ಗ್ರೂಪ್ 1 ಸರ್ಕಾರಿ ಕೆಲಸವನ್ನು ನೀಡಿದ್ದಾರೆ.
ಸಂತೋಷ್ ಬಾಬು ಅವರ ಪೋಷಕರು, ಪತ್ನಿ, ಮಕ್ಕಳನ್ನು ಸೂರ್ಯಪೇಟೆಯ ತಮ್ಮ ನಿವಾಸಕ್ಕೆ ಕರೆಸಿ, ಸಾಂತ್ವನ ಹೇಳಿದರು. ಇನ್ನು ನೇಮಕಾತಿ ಪತ್ರದಲ್ಲಿ ಹುದ್ದೆಯನ್ನು ನಮೂದಿಸಿಲ್ಲ. ಈ ಕುರಿತು ಮಾತನಾಡಿದ ರಾಜ್ಯ ಇಂಧನ ಸಚಿವ ಜಿ.ಜಗದೀಶ್ ರೆಡ್ಡಿ, ಸಂತೋಷ್ ಪತ್ನಿ ಸಂತೋಷಿಗೆ ಯಾವ ಇಲಾಖೆಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆಯೋ ಅದೇ ಇಲಾಖೆಯಲ್ಲಿ ಹುದ್ದೆ ನೀಡಲಾಗುವುದು ಎಂದರು.