ಕರ್ನಾಟಕ

karnataka

By

Published : Apr 29, 2020, 10:18 PM IST

ETV Bharat / bharat

ಆಗಸ್ಟ್​ನಿಂದ ಕಾಲೇಜುಗಳು ಶುರು: ಸೆಮಿಸ್ಟರ್ ಪರೀಕ್ಷೆಗಳು ನಡೆಯುವುದು ಯಾವಾಗ?

ಕೊರೊನಾ ವೈರಸ್​ ಬಿಕ್ಕಟ್ಟು ಹಾಗೂ ಲಾಕ್​ಡೌನ್​ನಿಂದ ದೇಶಾದ್ಯಂತ ಮುಚ್ಚಿದ್ದ ಕಾಲೇಜುಗಳು ಯಾವಾಗ ತೆರೆಯುತ್ತೇವೆ ಎಂಬ ಹಲವರ ಪ್ರಶ್ನೆಗೆ ಯುಜಿಸಿ ಕೊನೆಗೂ ಉತ್ತರ ನೀಡಿದೆ.

University Grants Commission
ಯುಜಿಸಿ

ನವದೆಹಲಿ: ಪ್ರಸ್ತುತ ವಿದ್ಯಾರ್ಥಿಗಳಿಗೆ ಆಗಸ್ಟ್​ನಲ್ಲಿ ಮತ್ತು ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್​ನಲ್ಲಿ ಕಾಲೇಜು ಬೋಧನೆ ಆರಂಭವಾಗಲಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೇಳಿದೆ.

ಕೋವಿಡ್-19 ಬಿಕ್ಕಟ್ಟು ಮತ್ತು ನಂತರದ ಲಾಕ್​ಡೌನ್​ ದೃಷ್ಟಿಯಲ್ಲಿ ಇರಿಸಿಕೊಂಡು, ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್​ನ ಮಾರ್ಗಸೂಚಿಗಳನ್ನು ಯುಜಿಸಿ ವಿವರಿಸಿದೆ. ಜುಲೈ ತಿಂಗಳಲ್ಲಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗುತ್ತದೆ ಎಂದಿದೆ.

ಇಂಟರ್​ ಮಿಡಿಯೆಟ್​ ವಿದ್ಯಾರ್ಥಿಗಳನ್ನು ಈಗಿನ ಮತ್ತು ಹಿಂದಿನ ಸೆಮಿಸ್ಟರ್​ನ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಶ್ರೇಣೀಕರಿಸಲಾಗುವುದು. ಕೋವಿಡ್-19 ಪರಿಸ್ಥಿತಿ ಹತೋಟಿಗೆ ಬಂದ ರಾಜ್ಯಗಳಲ್ಲಿ ಜುಲೈ ತಿಂಗಳಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಟರ್ಮಿನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜುಲೈ ಮಾಸಿಕದಲ್ಲಿ ಪರೀಕ್ಷೆ ನಡೆಸಬಹುದು ಎಂದು ಹೇಳಿದೆ.

ವಿಶ್ವವಿದ್ಯಾಲಯಗಳು ಆರು ದಿನಗಳ ವಾರದ ಮಾದರಿಯನ್ನು ಅನುಸರಿಸಬಹುದು. ಲಾಕ್​ಡೌನ್​ ಅವಧಿಯಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪ್ರವಾಸದ ಇತಿಹಾಸ ಅಥವಾ ಉಳಿದುಕೊಳ್ಳುವ ಮಾಹಿತಿ ಇರಿಸಿಕೊಳ್ಳಬೇಕು. ಎಂಫಿಲ್, ಪಿಎಚ್​ಡಿ ವಿದ್ಯಾರ್ಥಿಗಳಿಗೆ 6 ತಿಂಗಳ ಅವಧಿಯನ್ನು ವಿಸ್ತರಿಸಿದೆ. ವೈವಾ-ವಾಯ್ಸ್ ಅನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ ಎಂದು ತಿಳಿಸಿದೆ.

ABOUT THE AUTHOR

...view details