ನವದೆಹಲಿ:ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಕರ್ನಲ್ ಆಶುತೋಷ್ ಶರ್ಮಾ ಭಯೋತ್ಪಾದಕರ ವಿರುದ್ಧದ ಹೋರಾಟ ನಡೆಸುತ್ತಲೇ ಹುತಾತ್ಮರಾಗಿದ್ದಾರೆ. ಉಗ್ರರ ವಿರುದ್ಧದ ಅನೇಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇವರು ಆರೂವರೆ ವರ್ಷದ ಕಠಿಣ ಪರಿಶ್ರಮದ ಬಳಿಕ ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದರು.
ಒಂದಲ್ಲ, ಎರಡಲ್ಲ, ಆರೂವರೆ ವರ್ಷ! 13ನೇ ಪ್ರಯತ್ನದಲ್ಲಿ ಸೇನೆ ಸೇರಿದ್ದರು ಆಶುತೋಷ್ ಶರ್ಮಾ - ಭಾರತೀಯ ಸೇನೆ
ಜಮ್ಮುಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧ ಆಶುತೋಷ್ ಶರ್ಮಾ ಈ ಹಿಂದೆ ಎರಡು ಸಲ ಶೌರ್ಯ ಪದಕಕ್ಕೂ ಭಾಜನರಾಗಿದ್ದರು.
Col Ashutosh Sharma
ಉಗ್ರರ ವಿರುದ್ಧದ ಅನೇಕ ಸಮರದಲ್ಲಿ ಭಾಗಿಯಾಗಿ ಎರಡು ಸಲ ಶೌರ್ಯ ಪ್ರಶಸ್ತಿ ಪಡೆದುಕೊಂಡಿರುವ ಕರ್ನಲ್ ಆಶುತೋಷ್ ಶರ್ಮಾ ನಿನ್ನೆ ಪ್ರಾಣ ಕಳೆದುಕೊಂಡಿದ್ದಾರೆ.
ಭಾರತೀಯ ಸೇನೆ ಸೇರಿಕೊಳ್ಳಬೇಕು ಎಂಬ ಉತ್ಕಟ ಮಹತ್ವಾಕಾಂಕ್ಷೆ ಹೊಂದಿದ್ದ ಇವರು ಆರು ವರ್ಷಗಳ ಕಾಲ ಅದಕ್ಕಾಗಿ ತಯಾರಿ ನಡೆಸಿದ್ದರು. ಬರೋಬ್ಬರಿ 12 ಸಲ ಪ್ರಯತ್ನ ನಡೆಸಿದ್ದು 13ನೇ ಪ್ರಯತ್ನದಲ್ಲಿ ಭಾರತೀಯ ಸೇನೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶ ಕಂಡಿದ್ದರು. 2000ನೇ ಇಸವಿಯಲ್ಲಿ ಸೇನೆ ಸೇರಿದ್ದು, ಬಳಿಕ ಉಗ್ರರ ಪಾಲಿಗೆ ಸಿಂಹಸ್ವಪ್ನವಾಗಿದ್ದರು.