ಕೊಯಮತ್ತೂರು(ತಮಿಳುನಾಡು): ಕೊರೊನಾ ಲಾಕ್‌ಡೌನ್ ಮಧ್ಯೆಯೂ ನೂರಾರು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಶ್ರಮಿಕ್ ವಿಶೇಷ ರೈಲಿನ ಪಾಸ್ ಪಡೆಯುವುದಕ್ಕಾಗಿ ಕೊಯಮತ್ತೂರಿನ ಸುಂದರಪುರಂ ಪ್ರದೇಶದಲ್ಲಿ ಜಮಾಯಿಸಿದರು.
ಶ್ರಮಿಕ್ ರೈಲಿಗೆ ಪಾಸ್ ಪಡೆಯುವ ಧಾವಂತ: ಒಮ್ಮೆಲೇ ಜಮಾಯಿಸಿದ ನೂರಾರು ಕಾರ್ಮಿಕರು! - ತಮಿಳುನಾಡಿನಲ್ಲಿ ಜಮಾಯಿಸಿದ ನೂರಾರು ಕಾರ್ಮಿಕರು
ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ತೆರಳಲು ಅನುಮತಿ ಪಡೆಯುವುದಕ್ಕಾಗಿ ಕೊಯಮತ್ತೂರಿನ ಸುಂದರಪುರಂ ಪ್ರದೇಶದಲ್ಲಿ ನೂರಾರು ಕಾರ್ಮಿಕರು ಗುಂಪು ಸೇರಿದ್ದಾರೆ.

ಶ್ರಮಿಕ್ ರೈಲಿಗೆ ಪಾಸ್ ಪಡೆಯುವ ದಾವಂತ
ಪಾಸ್ ಪಡೆಯಲು ಸರತಿಯಲ್ಲಿ ನಿಂತಿದ್ದ ನೂರಾರು ವಲಸೆ ಕಾರ್ಮಿಕರು ಸಾಮಾಜಿಕ ಅಂತರ ಪಾಲಿಸಿರಲಿಲ್ಲ. ಹಲವರು ಮಾಸ್ಕ್ ಧರಿಸದೆ ತಿರುಗಾಡುತ್ತಿರುವ ದೃಶ್ಯ ಕಂಡು ಬಂದಿದೆ.
ವಿವಿಧ ರಾಜ್ಯಗಳಿಂದ ಇಲ್ಲಿಯವರೆಗೆ 1,595 ಶ್ರಮಿಕ್ ವಿಶೇಷ ರೈಲುಗಳಲ್ಲಿ 21 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ರಾಜ್ಯಗಳನ್ನು ತಲುಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗೆ ತಮ್ಮ ರಾಜ್ಯಗಳಿಗೆ ತೆರಳಲು ಗೃಹ ಸಚಿವಾಲಯ ಅನುಮತಿ ನೀಡಿದ ನಂತರ ರೈಲ್ವೆ ಇಲಾಖೆ ವಿಶೇಷ ರೈಲು ಸೇವೆಗಳನ್ನು ಒದಗಿಸುತ್ತಿದೆ.