ಕೊಯಿಮತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗದ ಕಣ್ಗಾವಲು ಪಡೆ, ದಿನದಿಂದ ದಿನಕ್ಕೆ ದಾಖಲೆ ರಹಿತ ನಗ-ನಾಣ್ಯ ವಶಪಡಿಸಿಕೊಳ್ಳುತ್ತಲಿದೆ.
ಆಯೋಗದ ಹದ್ದಿನ ಕಣ್ಣು: ದಾಖಲೆ ರಹಿತ 146 ಕೆಜಿ ಚಿನ್ನದ ಗಟ್ಟಿ ವಶಕ್ಕೆ - undefined
ದಾಖಲೆ ರಹಿತ 146 ಕೆಜಿ ಚಿನ್ನದ ಗಟ್ಟಿ ವಶಕ್ಕೆ ಪಡೆದ ಕಣ್ಗಾವಲು ಪಡೆ. ಇದು ಜ್ಯುವೆಲರಿ ಶಾಪ್ಗಳಿಗೆ ಸೇರಿದ ಚಿನ್ನ ಎಂದು ತಿಳಿದುಬಂದಿದೆ. ದಾಖಲೆ ನೀಡಿದ್ರೆ ನೀಡುವುದಾಗಿ ಭರವಸೆ ನೀಡಿದ ಅಧಿಕಾರಿಗಳು.
ದಾಖಲೆ ರಹಿತ 146 ಕೆಜಿ ಚಿನ್ನದ ಗಟ್ಟಿ ವಶಕ್ಕೆ
ತಮಿಳುನಾಡಿನ ಕೊಯಿಮತ್ತೂರು ಬಳಿಯ ಪುಲಿಕುಲಂನಲ್ಲಿ ಶುಕ್ರವಾರ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 146 ಕೆಜಿ ಬಂಗಾರವನ್ನು ಕಣ್ಗಾವಲು ಪಡೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
ಚಿನ್ನಾಭರಣ ಅಂಗಡಿಗಳಿಗೆ ಚಿನ್ನವನ್ನು ಸಾಗಿಸುತ್ತಿದ್ದಾಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣ ವ್ಯಾಪಾರಸ್ಥರು ಸ್ಥಳಕ್ಕೆ ಬಂದು ಇದು ತಮ್ಮದೆಂದು ಹೇಳಿಕೊಂಡಿದ್ದಾರೆ. ಆದ್ರೆ ದಾಖಲೆ ಕೊಟ್ರೆ ಮರಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
Last Updated : Apr 6, 2019, 9:38 AM IST