ಕರ್ನಾಟಕ

karnataka

ETV Bharat / bharat

‘ಮಸಾಲೆಯುಕ್ತ ಮಜ್ಜಿಗೆ’ ಪರಿಚಯಿಸಲಿದೆ ಕೋಕಾ-ಕೋಲಾ ಇಂಡಿಯಾ!! - ಡೈರಿ ಬ್ರಾಂಡ್ ವಿಐಓ

ಪ್ರಸ್ತುತ ಕೋಕಾ-ಕೋಲಾ ಭಾರತದದ ಪ್ರಮುಖ ಪಾನೀಯ ಕಂಪನಿಗಳಲ್ಲಿ ಒಂದಾಗಿದೆ. ಇದು 1993ರಲ್ಲಿ ಆರ್ಥಿಕ ಉದಾರೀಕರಣದ ನಂತರ ಭಾರತ ಮಾರುಕಟ್ಟೆ ಪ್ರವೇಶಿಸಿತ್ತು..

Coca-Cola India introduces buttermilk product
‘ಮಸಾಲೆಯುಕ್ತ ಮಜ್ಜಿಗೆ’ಯನ್ನು ಪರಿಚಯಿಸಲಿದೆ ಕೋಕಾ-ಕೋಲಾ ಇಂಡಿಯಾ

By

Published : Jun 15, 2020, 6:58 PM IST

ನವದೆಹಲಿ :ಪ್ರಸಿದ್ದ ತಂಪು ಪಾನೀಯ ಕೋಕಾ-ಕೋಲಾ ಇಂಡಿಯಾ ಕಂಪನಿ ತನ್ನ ಡೈರಿ ಬ್ರಾಂಡ್ ‘ವಿಐಒ’ ಅಡಿಯಲ್ಲಿ ‘ಮಸಾಲೆಯುಕ್ತ ಮಜ್ಜಿಗೆ’ಯನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬಹುಪಾಲು ಜನಾಂಗ ಒಪ್ಪಿಕೊಳ್ಳುವ, ಸ್ಥಳೀಯರು ಖರೀದಿಸುವ ಪ್ರಾದೇಶಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆಯಲು ಕಂಪನಿ ಉದ್ದೇಶಿಸಿದೆ.

ಹೊಸ ಉತ್ಪನ್ನದ ಹಿಂದಿನ ಆಲೋಚನೆಯ ಕುರಿತು ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ತಾಂತ್ರಿಕ ಮತ್ತು ಸರಬರಾಜು ಸರಪಳಿಯ ಉಪಾಧ್ಯಕ್ಷ ಸುನಿಲ್‌ ಗುಲಾಟಿ ಅವರು ಮಾತನಾಡಿ, ಸ್ಥಳೀಯ ಗ್ರಾಹಕ ಕೇಂದ್ರಿತ ಉತ್ಪನ್ನವನ್ನು ತಯಾರಿಸುವುದರಿಂದ ಬಹುಪಾಲು ಗ್ರಾಹಕರನ್ನು ಹೊಂದಬಹುದು. ಹಾಗಾಗಿ ಇದೇ ದಿಸೆಯಲ್ಲಿ ಹೆಚ್ಚು ಬಂಡವಾಳ ಹೂಡಲಾಗಿದೆ ಎಂದರು.

ಪ್ರಸ್ತುತ ಕೋಕಾ-ಕೋಲಾ ಭಾರತದದ ಪ್ರಮುಖ ಪಾನೀಯ ಕಂಪನಿಗಳಲ್ಲಿ ಒಂದಾಗಿದೆ. ಇದು 1993ರಲ್ಲಿ ಆರ್ಥಿಕ ಉದಾರೀಕರಣದ ನಂತರ ಭಾರತ ಮಾರುಕಟ್ಟೆ ಪ್ರವೇಶಿಸಿತ್ತು.

ABOUT THE AUTHOR

...view details