ಕರ್ನಾಟಕ

karnataka

ETV Bharat / bharat

ಕಲ್ಲಿದ್ದಲು ಹಗರಣ ತನಿಖೆ ನಡೆಸುವ ಅಧಿಕಾರಿಗಳ ಪಟ್ಟಿ ಕೊಡಿ: ಇಡಿ, ಸಿಬಿಐಗೆ ಸುಪ್ರೀಂ ಸೂಚನೆ - ಕಲ್ಲಿದ್ದಲು ಹಗರಣ

ಕಳೆದ ವಾರ ಜಾರಿ ನಿರ್ದೇಶನಾಲಯವು 40ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಅನುಮತಿ ಕೋರಿ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು. ಇದೀಗ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಉಭಯ ಸ್ವಾಯತ್ತ ತನಿಖಾ ಸಂಸ್ಥೆಗಳ ಅಧಿಕಾರಿಗಳ ಪಟ್ಟಿ ನೀಡುವಂತೆ ಕೋರ್ಟ್​ ಸೂಚಿಸಿದೆ.

ಸಾಂದರ್ಭಿಕ ಚಿತ್ರ

By

Published : Sep 17, 2019, 8:28 PM IST

ನವದೆಹಲಿ:ಕಲ್ಲಿದ್ದಲು ನಿವೇಶನ ಹಂಚಿಕೆ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಎಲ್ಲ ಅಧಿಕಾರಿಗಳ ಪಟ್ಟಿ ನೀಡುವಂತೆ ಉಭಯ ಸ್ವಾಯತ್ತ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಕಳೆದ ವಾರ ಜಾರಿ ನಿರ್ದೇಶನಾಲಯ 40ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್​ನ ಮೊರೆ ಹೋಗಿತ್ತು.

ನ್ಯಾ. ದೀಪಕ್ ಗುಪ್ತಾ ಮತ್ತು ನಾ. ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠವು ಇಂದು ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ತನಿಖೆ ಪೂರ್ಣಗೊಳಿಸಲು ಅಗತ್ಯವಿರುವ ಅಧಿಕಾರಿಗಳ ಪಟ್ಟಿಯನ್ನು ನೀಡುವಂತೆ ನ್ಯಾಯಾಲಯವು ಇಡಿ ಮತ್ತು ಸಿಬಿಐ ಎರಡನ್ನೂ ಕೇಳಿದೆ.

ತನಿಖಾ ಏಜೆನ್ಸಿಗಳೊಂದಿಗೆ ಡೆಪ್ಯುಟೇಶನ್‌ನಲ್ಲಿರುವ ಉಳಿದ ಅಧಿಕಾರಿಗಳನ್ನು ತಮ್ಮ ಮನೆಗೆ ವಾಪಸ್ ಕಳುಹಿಸಬಹುದು ಎಂದು ತಿಳಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.

ಪ್ರಕರಣದ ತನಿಖೆ ನಡೆಸುವ ಸಂಸ್ಥೆಗಳ ಯಾವುದೇ ಅಧಿಕಾರಿಯನ್ನು ತನ್ನ ಪೂರ್ವಾನುಮತಿಯಿಲ್ಲದೆ ವರ್ಗಾಯಿಸುವುದನ್ನು ಸುಪ್ರೀಂಕೋರ್ಟ್ ನಿರ್ಬಂಧಿಸಿತ್ತು.

ABOUT THE AUTHOR

...view details