ಕರ್ನಾಟಕ

karnataka

ETV Bharat / bharat

ಜ್ಯೂ.ಕಾಲೇಜ್​ಗಳಾಗಿ ಬದಲಾದ ಕೋಚಿಂಗ್​ ಕ್ಲಾಸ್​ಗಳು: ಸರ್ಕಾರ ನಿರ್ಧಾರಕ್ಕೆ ಹೈಕೋರ್ಟ್​ ಗರಂ

ಕೋಚಿಂಗ್​ ತರಗತಿಗಳನ್ನು ಜ್ಯೂನಿಯರ್​ ಕಾಲೇಜು​ಗಳಾಗಿ ನಡೆಸಲು ನೀಡಿದ ಸರ್ಕಾರ ಆದೇಶವನ್ನು ಹೈಕೋರ್ಟ್​ ತಡೆ ಹಿಡಿದಿದೆ.

Coaching classes as junior colleges, Coaching classes as junior colleges on HC restrains, Coaching classes as junior colleges on HC restrains Maha govt, Coaching classes as junior colleges news, ಕಿರಿಯ ಕಾಲೇಜ್​ಗಳಾಗಿ ಬದಲಾದ ಕೋಚಿಂಗ್​ ಕ್ಲಾಸ್​ಗಳು, ಕಿರಿಯ ಕಾಲೇಜ್​ಗಳಾಗಿ ಬದಲಾದ ಕೋಚಿಂಗ್​ ಕ್ಲಾಸ್​ಗಳ ಸುದ್ದಿ, ಬಾಂಬೆ ಹೈಕೋರ್ಟ್​ ಸುದ್ದಿ,
ಸಂಗ್ರಹ ಚಿತ್ರ

By

Published : Jan 29, 2020, 12:04 PM IST

ಮುಂಬೈ:ಕೋಚಿಂಗ್​ ತರಗತಿಗಳನ್ನು ಜ್ಯೂನಿಯರ್​ ಕಾಲೇಜು​ಗಳಾಗಿ ನಡೆಸಲು ಮಹಾರಾಷ್ಟ್ರ ಸರ್ಕಾರ ನೀಡಿರುವ ಅನುಮತಿಯನ್ನು ಬಾಂಬೆ ಹೈಕೋರ್ಟ್​ ತಡೆ ಹಿಡಿದಿದೆ.

ಏನಿದು ಘಟನೆ?
ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುತ್ತಿದ್ದ ಕೋಚಿಂಗ್​ ತರಗತಿಗಳು ಜ್ಯೂನಿಯರ್​ ಕಾಲೇಜು​ಗಳಾಗಿ ಮಾರ್ಪಟ್ಟಿದ್ದವು. ಇದಕ್ಕೆ ಸ್ವ-ಹಣಕಾಸು ಶಾಲೆ ಕಾಯ್ದೆ 2012 ಪ್ರಕಾರ, ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿತ್ತು. ಇದರು ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಅರ್ಜಿ ಸಲ್ಲಿಸಿದ್ದರು.

ವಾದವೇನು?
ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ಸರ್ಕಾರ ಕೋಚಿಂಗ್​ ತರಗತಿಗಳನ್ನು ಜ್ಯೂನಿಯರ್​ ಕಾಲೇಜು​ಗಳಾಗಿ ಮಾರ್ಪಡಿಸಲು ಅನುಮತಿಸಿದೆ. ಕಾನೂನು ಪ್ರಕಾರ, ಕಾಲೇಜು​ಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಮುಂತಾದ ಸೌಕರ್ಯಗಳು ಬೇಕು.ಸುಮಾರು ಅರ್ಧ ಎಕರೆ ಅಥವಾ 500 ಚದರ ಮೀಟರ್ ಜಮೀನಿನಂತಹ ವಿಶಾಲವಾದ ಸ್ಥಳವನ್ನು ಹೊಂದಿರಬೇಕು. ನಿರ್ದಿಷ್ಟ ಮೂಲಸೌಕರ್ಯಗಳು ಶಾಲಾ ಅಥವಾ ಕಾಲೇಜು ಮಂಡಳಿ ಮಕ್ಕಳಿಗೆ ನೀಡಬೇಕೆಂದು ಕಾನೂನು ಸೂಚಿಸುತ್ತದೆ ಎಂದು ಅರ್ಜಿದಾರರ ವಕೀಲರಾದ ಅನಿಲ್ ಸಖಾರೆ ನ್ಯಾಯಾಲಯಕ್ಕೆ ತಿಳಿಸಿದರು.

ಕೋಚಿಂಗ್​ ಕೇಂದ್ರಗಳು ಜ್ಯೂನಿಯರ್​ ತರಗತಿಗಳನ್ನು ಮಾರ್ಪಟ್ಟ ಕಟ್ಟಡಗಳು ಕಾನೂನುಬದ್ಧವಾಗಿವೆಯೇ ಅಥವಾ ಕಾನೂನುಬಾಹಿರವೇ ಎಂಬುದರ ಬಗ್ಗೆ ಸರ್ಕಾರ ಯಾವುದೇ ಪರಿಶೀಲನೆ ನಡೆಸುತ್ತಿಲ್ಲ ಎಂದು ಕೋರ್ಟ್​ಗೆ ತಿಳಿಸಿದರು.

ಸರ್ಕಾರದ ಅನುಮತಿಗೆ ತಡೆ!
ಎರಡು ರೂಮ್​ ಅಥವಾ ಮಾಲ್‌ನ ಮಹಡಿ ಅಥವಾ ವಾಣಿಜ್ಯ ಘಟಕದಿಂದ ನಡೆಯುವ ಕೋಚಿಂಗ್​ ತರಗತಿಗಳನ್ನು ಸಹ ಸರ್ಕಾರದಿಂದ ಜ್ಯೂನಿಯರ್​ ಕಾಲೇಜ್​ ನಡೆಸಲು ಅನುಮತಿ ಪಡೆಯುತ್ತಿದೆ. ಅಂತಹ ಕಟ್ಟಡಗಳು ಸಾಮಾನ್ಯವಾಗಿ ಉದ್ಯೋಗ ಪ್ರಮಾಣಪತ್ರ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಸಹ ಹೊಂದಿರುವುದಿಲ್ಲ ಎಂದು ದ್ವಿ-ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಎಸ್​.ಸಿ. ಧರ್ಮಧಿಕಾರಿ ಮತ್ತು ಆರ್.ಐ.ಚಾಗ್ಲಾ ಗಮನಿಸಿದರು.

ಒಂದು ವೇಳೆ ಅಂತಹ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದೇ ಆದಲ್ಲಿ ಯಾರು ಹೊಣೆ? ಎಂದು ಸರ್ಕಾರಕ್ಕೆ ನ್ಯಾಯಮೂರ್ತಿ ಧರ್ಮಾಧಿಕಾರಿ ಪ್ರಶ್ನಿಸಿದ್ದಾರೆ. ಸರಿಯಾಗಿ ಪರಿಶೀಲನೆ ಕೈಗೊಳ್ಳದೇ ಕಿರಿಯ ಕಾಲೇಜು​ಗಳು ಸರ್ಕಾರ ಅನುಮತಿ ನೀಡುತ್ತಿದೆ ಎಂದು ಕೋರ್ಟ್​ ಭಾವಿಸುತ್ತಿದೆ. ಪರಿಶೀಲನಾ ಸಮಿತಿಗೆ ಕೋರ್ಟ್​ಗೆ ತಿಳಿಸುವವರೆಗೆ ಯಾವುದೇ ಕೋಚಿಂಗ್ ಕ್ಲಾಸ್​ಗಳಿಗೆ ಕಿರಿಯ ಕಾಲೇಜಾಗಿ ಕಾರ್ಯನಿರ್ವಹಿಸಲು ಹೊಸ ಅನುಮತಿಗಳನ್ನು ನೀಡಬೇಡಿ ಎಂದು ಸರ್ಕಾರದ ಆದೇಶಕ್ಕೆ ಮುಂಬೈ ನ್ಯಾಯಾಲಯ ತಡೆಯೊಡ್ಡಿದೆ. ಮತ್ತೆ ಈ ಪ್ರಕರಣದ ವಿಚಾರಣೆ ಮಾರ್ಚ್​​ 4 ರಂದು ನಡೆಯಲಿದೆ.

ABOUT THE AUTHOR

...view details