ಕರ್ನಾಟಕ

karnataka

ETV Bharat / bharat

ಮಕರ ಸಂಕ್ರಾಂತಿ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಸಿಎಂ ಯೋಗಿ ಹೇಳಿದ್ದಿಷ್ಟು! - ಯೋಗಿ ಆದಿತ್ಯನಾಥ್​​ರ ಮಕರ ಸಂಕ್ರಾಂತಿ ಸಂಭ್ರಮಾಚರಣೆ

ಮಕರ ಸಂಕ್ರಾಂತಿಯನ್ನು ಎಲ್ಲೆಡೆ ವಿಶೇಷವಾಗಿ ಆಚರಿಸಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಗೋರಕ್ಷನಾಥ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

CM Yogi celebrated sankranti
ಸಿಎಂ ಯೋಗಿ ಆದಿತ್ಯನಾಥ್​​ರ ಮಕರ ಸಂಕ್ರಾಂತಿ ಸಂಭ್ರಮಾಚರಣೆ

By

Published : Jan 15, 2020, 8:59 AM IST

ಗೋರಖ್‌ಪುರ:ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.

ಮುಂಜಾನೆ 3: 50 ರ ಸುಮಾರಿಗೆ ಖಿಚ್ಡಿ ಅರ್ಪಿಸಲು ಸಿಎಂ ಯೋಗಿ ಗೋರಕ್ಷನಾಥ ದೇವಸ್ಥಾನಕ್ಕೆ ಗೋರಕ್ಷ ಪೀಠಾಧೀಶ್ವರ ರೂಪದಲ್ಲಿ ಪ್ರವೇಶಿಸಿ ಬಾಬಾ ಪ್ರತಿಮೆಯ ಮುಂದೆ ನಿಂತು ಧ್ಯಾನ ಮಾಡಿದರು. ಬಾಬಾ ಗೋರಖನಾಥರಿಗೆ ಖಿಚಡಿಯನ್ನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಜೊತೆಗೆ ಶಾಂತಿ ಸೌಹಾರ್ದತೆಯಿಮದ ಆಚರಿಸಲು ಕರೆ ನೀಡಿದರು.

ಸಿಎಂ ಯೋಗಿ ಆದಿತ್ಯನಾಥ್​​ರ ಮಕರ ಸಂಕ್ರಾಂತಿ ಸಂಭ್ರಮಾಚರಣೆ

ಮಕರ ಸಂಕ್ರಾಂತಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ನಮ್ಮ ದೇಶದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸಿ ಉತ್ತರಾಯಣನಾಗುತ್ತಾನೆ, ಇದು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಕರ ಸಂಕ್ರಾಂತಿಯ ಮೇಲೆ ಸೂರ್ಯ ದೇವರ ಚಿಹ್ನೆಯಲ್ಲಿನ ಬದಲಾವಣೆಯು ಕತ್ತಲೆಯಿಂದ ಬೆಳಕಿನೆಡೆಗೆ ಚಲಿಸುವುದನ್ನು ಸೂಚಿಸುತ್ತದೆ. ಆದ್ದರಿಂದ, ಸೂರ್ಯ ದೇವರನ್ನು ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ವಿಶೇಷವಾಗಿ ಹಿಂದೂ ಸಂಪ್ರದಾಯದಲ್ಲಿ ಎಲ್ಲ ಶುಭ ಕಾರ್ಯಗಳು ಈ ದಿನದಿಂದಲೇ ಪ್ರಾರಂಭವಾಗುತ್ತವೆ ಎಂದೂ ತಿಳಿಸಿದರು.

ಗೋರಖನಾಥ ದೇವಸ್ಥಾನದಲ್ಲಿ ಖಿಚ್ಡಿ ಅರ್ಪಿಸುವ ಸಂಪ್ರದಾಯವು ಆದಿ ಅವಧಿಯ ಆರಂಭದಿಂದಲೂ ನಡೆಯುತ್ತಲೇ ಇದೆ. ಇಲ್ಲಿನ ಮಹಂತರು ಪ್ರತೀವರ್ಷ ಮಕರ ಸಂಕ್ರಾಂತಿಯಲ್ಲಿ ಗೋರಕ್ಷ ಪೀಠಾಧಿಶ್ವರ ಎಂದು ಆಚರಿಸುತ್ತಾರೆ. ಇದರೊಂದಿಗೆ, ಪೂರ್ವಾಂಚಲ್ ಮಾತ್ರವಲ್ಲ, ದೇಶದ ಮೂಲೆ ಮೂಲೆಯಿಂದ ಬರುವ ಭಕ್ತರು ಕೂಡ ಇಲ್ಲಿ ಖಿಚಡಿ ಅರ್ಪಿಸುತ್ತಾರೆ. ಖಿಚ್ಡಿ ಜಾತ್ರೆ ಸಹ ಇಲ್ಲಿ ನಡೆಯಲಿದ್ದು, ಈ ತಿಂಗಳು ಪೂರ್ತಿ ನಡೆಯುತ್ತದೆಯೆಂದು ಮಾಹಿತಿ ನೀಡಿದರು.

ABOUT THE AUTHOR

...view details