ಅಯೋಧ್ಯೆ:ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಘೋಷಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ರೂ. ನೀಡಿದ ಮಹಾ ಸಿಎಂ: 'ನಾನು ಹಿಂದುತ್ವದಿಂದ ಬೇರ್ಪಟ್ಟಿಲ್ಲ' - ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ರಾಮ ಮಂದಿರ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಾನು ಬಿಜೆಪಿಯಿಂದ ಬೇರ್ಪಟ್ಟಿದ್ದೇನೆಯೇ ವಿನಃ ಹಿಂದುತ್ವದಿಂದಲ್ಲ. ಬಿಜೆಪಿ ಎಂದರೆ ಹಿಂದುತ್ವ ಎಂದಲ್ಲ. ಹಿಂದುತ್ವ ಬೇರೆ, ಬಿಜೆಪಿ ಬೇರೆ ಎಂದರು.
ಉದ್ಧವ್ ಠಾಕ್ರೆ
2019ರ ನವೆಂಬರ್ 29 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ , 100 ದಿನಗಳನ್ನು ಪೂರೈಸಿರುವ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಲು ಅಯೋಧ್ಯೆಗೆ ಬಂದಿದ್ದಾರೆ.
ರಾಮ ಮಂದಿರಕ್ಕೆ ಭೇಟಿ ನೀಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ರಾಮನ ಆಶೀರ್ವಾದ ಪಡೆಯಲು ನಾನಿಲ್ಲಿಗೆ ಬಂದಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ಇದು ನನ್ನ ಮೂರನೇ ಭೇಟಿ. ರಾಮ ಮಂದಿರ ನಿರ್ಮಾಣಕ್ಕೆ ನಾನು ರಾಜ್ಯದಿಂದ ಅಲ್ಲ, ನನ್ನ ಸ್ವಂತ ಟ್ರಸ್ಟ್‌ನಿಂದ ಒಂದು ಕೋಟಿ ರೂ. ದೇಣಿಗೆ ನೀಡುತ್ತಿದ್ದೇನೆ ಎಂದು ಪ್ರಕಟಿಸಿದರು.
Last Updated : Mar 7, 2020, 4:56 PM IST