ಕರ್ನಾಟಕ

karnataka

ETV Bharat / bharat

ಕಾರ್ಮಿಕರಿಗೆ ಟಿಕೆಟ್ ದುಡ್ಡು ಕೊಡದವರು ಕಳ್ಳರನ್ನು ವಿಮಾನದಲ್ಲಿ ಕರೆಸಿಕೊಂಡರು : ಬಿಜೆಪಿಗೆ ದೀದಿ ಟಾಂಗ್ - ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಭಾಷಣ

ಸಾಕಷ್ಟು ಹಣ ಸಂಪಾದಿಸಿರುವವರು ತಮ್ಮ ಆಸ್ತಿಯನ್ನು ಮತ್ತು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

CM Mamata Banerjee slams BJP
ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

By

Published : Feb 4, 2021, 8:30 PM IST

ಕೊಲ್ಕತ್ತಾ ( ಪಶ್ಚಿಮ ಬಂಗಾಳ ) :ಲಾಕ್ ಡೌನ್ ಸಮಯದಲ್ಲಿ ಅನೇಕ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಅಂತಹವರಿಗೆ ರೈಲು ಟಿಕೆಟ್ ಕೂಡ ನೀಡದ ಅವರು (ಕೇಂದ್ರ ಸರ್ಕಾರ), ಕೆಲವು ಕಳ್ಳರನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲು ಸಾಕಷ್ಟು ಖರ್ಚು ಮಾಡಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಓದಿ : ಬಾಲಿವುಡ್​​ ತಾರೆಯರ ಶೀತಲ ಸಮರಕ್ಕೆ ಕಾರಣವಾದ ರಿಹಾನ್ನಾ ಟ್ವೀಟ್‌

ಟಿಎಂಸಿಯಿಂದ ಕೆಲವು ದೇಶದ್ರೋಹಿಗಳನ್ನು ಕರೆಸಿಕೊಂಡು ಬಂಗಾಳವನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಗೆ ಹೋಗುವವರು (ಬಿಜೆಪಿ) ದಂಗೆಕೋರರು ಎಂಬುದನ್ನು ನೆನಪಿಟ್ಟುಕೊಳ್ಳಿ. ಸಾಕಷ್ಟು ಹಣ ಸಂಪಾದಿಸಿರುವವರು ತಮ್ಮ ಆಸ್ತಿಯನ್ನು ಮತ್ತು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ದೀದಿ ಆರೋಪಿಸಿದ್ದಾರೆ.

ABOUT THE AUTHOR

...view details