ನವದೆಹಲಿ:ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಸಿಎಂ ಹಾಗೂ ಪೊಲೀಸರಿಗೆ 'ಯಾರೂ ಅಲ್ಲ' ಎಂದು ಹೇಳಿಕೆ ನೀಡಿದ್ದಾರೆ.
ಹಥ್ರಾಸ್ ಸಂತ್ರಸ್ತೆ ಯುಪಿ ಸಿಎಂಗೆ "ಯಾರೂ ಅಲ್ಲ": ಯೋಗಿ ನಡೆ ವಿರುದ್ಧ ರಾಹುಲ್ ವಾಗ್ದಾಳಿ
ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹಥ್ರಾಸ್ ಸಂತ್ರಸ್ತೆಯು ಸಿಎಂ ಹಾಗೂ ಪೊಲೀಸರಿಗೆ 'ಯಾರೂ ಅಲ್ಲ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಯೋಗಿ ನಡೆ ವಿರುದ್ಧ ರಾಹುಲ್ ವಾಗ್ದಾಳಿ
"ಸಿಎಂ ಯೋಗಿ ಸರ್ಕಾರ ಅನೇಕ ದಲಿತರು, ಮುಸ್ಲಿಂರನ್ನು, ಬುಡಕಟ್ಟು ಜನರನ್ನು ಭಾರತೀಯರು ಎಂದು ಪರಿಗಣಿಸುತ್ತಿಲ್ಲ. ಹಥ್ರಾಸ್ನಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಸಿಎಂ ಮತ್ತು ಪೊಲೀಸರು ಹೇಳುತ್ತಾರೆ. ಏಕೆಂದರೆ ಅವರಿಗೆ ಆ ಸಂತ್ರಸ್ತೆ ಯಾರೂ ಅಲ್ಲ" ಎಂದಿದ್ದಾರೆ. ಇನ್ನು ಟ್ವೀಟ್ ಜೊತೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನೂ ಲಗತ್ತಿಸಿದ್ದಾರೆ.
ಹಥ್ರಾಸ್ ಘಟನೆಯಲ್ಲಿ ಯೋಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ.