ಕರ್ನಾಟಕ

karnataka

ETV Bharat / bharat

ಪಳನಿ ಮುರುಗನ್ ಮೊರೆ ಹೋದ ಹೆಚ್​ಡಿಕೆ... ಮಗನ ಗೆಲುವಿಗೆ ವಿಶೇಷ ಪ್ರಾರ್ಥನೆ - ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ನಿಖಿಲ್​ ವಿರುದ್ಧ ಸುಮಲತಾ ಅಂಬರೀಶ್ ಸ್ಪರ್ಧೆ ನಡೆಸುತ್ತಿದ್ದು ಇದು ಸದ್ಯ ನಿಖಿಲ್ ತಂದೆ ಹೆಚ್​ಡಿಕೆ ತಲೆನೋವಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಮಗನ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ನಿಖಿಲ್

By

Published : Mar 26, 2019, 10:12 PM IST

ಮಧುರೈ:ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ನಿಖಿಲ್​​ ಗೆಲುವಿಗಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪಳನಿ ಮುರುಗನ್ ದೇವಸ್ಥಾನ

ಮಂಡ್ಯದಲ್ಲಿ ನಿಖಿಲ್​ ವಿರುದ್ಧ ಸುಮಲತಾ ಅಂಬರೀಶ್ ಸ್ಪರ್ಧೆ ನಡೆಸುತ್ತಿದ್ದು ಇದು ಸದ್ಯ ನಿಖಿಲ್ ತಂದೆ ಹೆಚ್​ಡಿಕೆ ತಲೆನೋವಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಮಗನ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದಿನ ಭೇಟಿಯಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಗಾಗಿ ಸಿಎಂ ಪೂಜೆ ಸಲ್ಲಿಸಿದ್ದಾರೆ.

ಮಧುರೈ ವಿಮಾನ ನಿಲ್ದಾಣದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ

ದೇವಸ್ಥಾನದ ಭೇಟಿಗೂ ಮುನ್ನ ಮಧುರೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಉತ್ತಮ ದೇಶಕ್ಕಾಗಿ ಮಹಾಘಟಬಂಧನ್ ರಚನೆಯಾಗಿದೆ. ಈ ಎಲ್ಲಾಪಕ್ಷಗಳು ಬದಲಾವಣೆಯನ್ನೇ ಗಮನದಲ್ಲಿರಿಸಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ದೇವಸ್ಥಾನದಲ್ಲಿ ಹೆಚ್​ಡಿಕೆ ಕುಟುಂಬ

ಆ ಬಳಿಕ ಮೋದಿ ಸರ್ಕಾರವನ್ನು ಟೀಕೆ ಮಾಡಿದ ಹೆಚ್​ಡಿಕೆ, ಕೇಂದ್ರದ ಆಡಳಿತದಲ್ಲಿ ರೈತರು ಅತ್ಯಂತ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಮೋದಿ ಮೇಲಿದ್ದ ನಿರೀಕ್ಷೆಗಳು ಇಂದು ಸಂಪೂರ್ಣ ಹುಸಿಯಾಗಿದೆ ಎಂದರು.

ABOUT THE AUTHOR

...view details