ನವದೆಹಲಿ:ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮುಗಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎರಡು ಪಟ್ಟಿಗಳೊಂದಿಗೆ ಗುರುವಾರ ದೆಹಲಿಗೆ ತೆರಳಿದ್ದು, ಅಚಿವ ಸಂಪುಟ ರಚನೆಯ ಬಗ್ಗೆ ಅಂತಿಮ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಅವರು ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ತೀವ್ರತೆಯನ್ನ ಗಮನಕ್ಕೆ ತಂದರು.
ನೆರೆ ಪರಿಹಾರ ಸಂಬಂಧ ಬೇಡಿಕೆ ಇರುವ ಪಟ್ಟಿ ಹಾಗೂ ಸಂಭಾವ್ಯ ಸಚಿವರ ಪಟ್ಟಿ ಜೊತೆಗೆ ಸಿಎಂ ಬಿಎಸ್ವೈ ದೆಹಲಿ ಫ್ಲೈಟ್ ಏರಿದ್ದರು.
ದೆಹಲಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಸಿಎಂ ಬಿಎಸ್ವೈ ದೆಹಲಿಯಲ್ಲಿ ಪ್ರಧಾನಿ ಭೇಟಿಗೂ ಮುನ್ನ ಮಾಧ್ಯಮದ ಜೊತೆಗೆ ಮಾತನಾಡಿದ ಸಿಎಂ ಬಿಎಸ್ವೈ, ಪ್ರಧಾನಿ ಮೋದಿ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯಲ್ರನ್ನು ಇಂದು ಭೇಟಿ ಮಾಡುತ್ತೇನೆ ಎಂದಿರುವ ಸಿಎಂ ಬಿಎಸ್ವೈ ನಾಳೆ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದು ಮಾಹಿತಿ ನೀಡಿದ್ದರು.
ನೆರೆ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ಗೆ ಮನವಿ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಸಿಎಂ ಯಡಿಯೂರಪ್ಪ, ಅವೆಲ್ಲವನ್ನು ನಾನು ಪ್ರಧಾನಿ ಜೊತೆ ಚರ್ಚಿಸುತ್ತೇನೆ ಎಂದು ಉತ್ತರಿಸಿ ನಿರ್ಗಮಿಸಿದರು. ಹೆಚ್ಚಿನ ವಿಷಯಗಳ ಬಗ್ಗೆ ಅವರು ಇಚ್ಛೆ ತೋರಲಿಲ್ಲ.