ಶಾಹ್ದೋಲ್ (ಮಧ್ಯಪ್ರದೇಶ):ಉತ್ತರಪ್ರದೇಶ ಮೂಲದ ದರೋಡೆಕೋರ ಅತೀಕ್ ಅಹ್ಮದ್ ಅನ್ಸಾರಿ ಆಪ್ತ ಮಹಮ್ಮದ್ ಅಖ್ತರ್ನನ್ನು ಶಾಹ್ದೋಲ್ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶಾಹ್ದೋಲ್ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್ ಶುಕ್ಲಾ, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಶಾಹ್ದೋಲ್ಗೆ ಬರಲು ಕಾರಣವೇನು ಮತ್ತು ಕಾನ್ಪುರ ಎನ್ಕೌಂಟರ್ ಆರೋಪಿ ವಿಕಾಸ್ ದುಬೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದಿದ್ದಾರೆ.