2020 ರಿಂದ 2030 ಕ್ಕೆ ಕೊನೆಗೊಳ್ಳುವ ಈ ದಶಕದಲ್ಲಿ ಜಗತ್ತನ್ನು ಕಾಡಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಯುನೆಸ್ಕೊ ಸಮೀಕ್ಷೆಯೊಂದನ್ನು ನಡೆಸಿದೆ. '2030 ರಲ್ಲಿನ ವಿಶ್ವ' ಎಂಬ ಹೆಸರಿನ ಈ ಸಾರ್ವಜನಿಕ ಸಮೀಕ್ಷೆಯನ್ನು ಜಗತ್ತಿನಾದ್ಯಂತ ನಡೆಸಲಾಗಿದೆ. ಪ್ರಸಕ್ತ ದಶಕದಲ್ಲಿ ಜೀವ ವೈವಿಧ್ಯ ನಾಶ ಹಾಗೂ ಹವಾಮಾನ ಬದಲಾವಣೆಯ ವಿಷಯಗಳೇ ಮುಖ್ಯವಾಗಿ ಜಗತ್ತನ್ನು ಕಾಡಲಿವೆ ಎಂದು ಬಹುತೇಕ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೇ ದಿಂದ ಸೆಪ್ಟೆಂಬರ್ವರೆಗೆ ನಡೆಯಿತು ಸಮೀಕ್ಷೆ
ವಿಶ್ವ-2030 ಸಮೀಕ್ಷೆಯು 2020ರ ಮೇ ತಿಂಗಳಿಂದ ಸೆಪ್ಟೆಂಬರ್ವರೆಗೆ ನಡೆಯಿತು. ಈ ದಶಕದ ಪ್ರಮುಖ ಸವಾಲುಗಳ ಬಗೆಗಿನ ಈ ಸಮೀಕ್ಷೆಯಲ್ಲಿ 15 ಸಾವಿರ ಜನ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಸ್ಯೆಗಳನ್ನು ಅರಿತುಕೊಳ್ಳಲು ಈ ಸಮೀಕ್ಷೆ ಸಹಕಾರಿಯಾಗಿದೆ.
ಹಿಂಸಾಚಾರ, ಅಸಮಾನತೆ, ಆಹಾರ ಕೊರತೆ .. ಇನ್ನೂ ಇವೆ ಸಮಸ್ಯೆಗಳು
ಹವಾಮಾನ ಬದಲಾವಣೆ, ಜೀವ ವೈವಿಧ್ಯ ನಾಶ, ಹಿಂಸಾಚಾರ, ಗಲಭೆಗಳು, ಯುದ್ಧ, ಅಸಮಾನತೆ, ಆಹಾರ ಕೊರತೆ, ನೀರು, ಮನೆ ಇವು ಬರುವ 10 ವರ್ಷಗಳಲ್ಲಿನ ಪ್ರಮುಖ ಸವಾಲುಗಳಾಗಿವೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಜನತೆ ಹೇಳಿದ್ದಾರೆ. ಇಂದು ನಾವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳ ಪರಿಹಾರ ಶಿಕ್ಷಣದಲ್ಲಿ ಅಡಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಇಡೀ ಜಗತ್ತು ಒಗ್ಗಟ್ಟಾಗಬೇಕು ಎನ್ನುವುದು ಹೌದಾದರೂ ಹಾಗಾಗುವುದು ಸಾಧ್ಯವಿಲ್ಲ ಎಂಬುದು ಸಹ ವಾಸ್ತವವಾಗಿದೆ.
ಪರಿಸರ ಸ್ನೇಹಿ ಕ್ರಮಗಳು, ಸಹಕಾರ ಅಗತ್ಯ