ನವದೆಹಲಿ:ಕೋವಿಡ್-19 ಶಂಕಿತರನ್ನು ಇರಿಸಲು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತನೆಗೊಂಡಿರುವ ರೈಲ್ವೆ ಬೋಗಿಗಳು ಉತ್ತಮ ವ್ಯವಸ್ಥೆಗಳನ್ನು ಒಳಗೊಂಡಿವೆ ಎಂದು ರೈಲ್ವೆ ಬೋಗಿಯ ಐಸೋಲೇಷನ್ ವಾರ್ಡ್ನಲ್ಲಿದ್ದು ಹೊರಬಂದ ಮೊದಲ ವ್ಯಕ್ತಿ ಹೇಳಿದ್ದಾರೆ.
ಸ್ವಚ್ಛ ಶೌಚಾಲಯಗಳು, ಬಣ್ಣ ಬಳಿದ ಡಸ್ಟ್ ಬಿನ್‌ಗಳು, ಆರಾಮದಾಯಕವಾದ ಹಾಸಿಗೆಗಳು, ಆಮ್ಲಜನಕದ ಸಿಲಿಂಡರ್‌ಗಳು ಮತ್ತು ಉನ್ನತ ದರ್ಜೆಯ ಆಸ್ಪತ್ರೆಯಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಸೌಲಭ್ಯಗಳು ಅಲ್ಲಿವೆ ಎಂದಿದ್ದಾರೆ.
ನಾನು ಈ ಹಿಂದೆ ರೈಲುಗಳಲ್ಲಿ ಬಹಳಷ್ಟು ಪ್ರಯಾಣಿಸಿದ್ದೇನೆ. ಆದರೆ ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತನೆಗೊಂಡ ರೈಲ್ವೆ ಬೋಗಿಯನ್ನು ಪ್ರವೇಶಿಸಿದಾಗ ಅದರ ಮಾರ್ಪಾಡುಗಳನ್ನು ನೋಡಿ ನನ್ನ ಊಹೆಗಳೆಲ್ಲಾ ಸುಳ್ಳಾಯಿತು. ಸೊಳ್ಳೆಗಳ ಸಮಸ್ಯೆ ಬಿಟ್ಟರೆ ಅಲ್ಲಿ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಾಸ್ತವ್ಯ ಆರಾಮದಾಯಕವಾಗಿತ್ತು ಎಂದು ಉತ್ತರ ಪ್ರದೇಶದ ಮಾವು ಪ್ರದೇಶದ ಕೃಷ್ಣಕಾಂತ್ ಶರ್ಮಾ ಹೇಳಿದ್ದಾರೆ.